
ಚೊಚ್ಚಲ ಸೀನಿಯರ್ ಮಹಿಳಾ T20 ಟ್ರೋಫಿ ಗೆದ್ದ ಕರ್ನಾಟಕ ಮಹಿಳಾ ಕ್ರಿಕೆಟ್ ತಂಡಕ್ಕೆ ಕನ್ನಡ ಕ್ರಾಂತಿದಳ ದಿಂದ ಅಭಿನಂದನೆಗಳು
ಸರ್ಕಾರವು ಮಹಿಳಾ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಬೇಕು.
ಚೊಚ್ಚಲ ಸೀನಿಯರ್ ಮಹಿಳಾ T20 ಟ್ರೋಫಿ ಗೆದ್ದ ಕರ್ನಾಟಕ ಮಹಿಳಾ ಕ್ರಿಕೆಟ್ ತಂಡಕ್ಕೆ ಕನ್ನಡ ಕ್ರಾಂತಿದಳ ದಿಂದ ಅಭಿನಂದನೆಗಳು
ಬೆಂಗಳೂರು: ಬಿಸಿಸಿಐ (BCCI) ಆಯೋಜಿಸಿದ್ದ ಸೀನಿಯರ್ ಮಹಿಳಾ T20 ಟ್ರೋಫಿ 2026ರ ಫೈನಲ್ ಪಂದ್ಯದಲ್ಲಿ ಬಲಿಷ್ಠ ರೈಲ್ವೇಸ್ ತಂಡವನ್ನು ರೋಚಕವಾಗಿ ಮಣಿಸಿ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿರುವ ಕರ್ನಾಟಕ ಮಹಿಳಾ ಕ್ರಿಕೆಟ್ ತಂಡಕ್ಕೆ ಕನ್ನಡ ಕ್ರಾಂತಿದಳದ ರಾಜ್ಯಾಧ್ಯಕ್ಷರಾದ ತೇಜಸ್ವಿ ನಾಗಲಿಂಗಸ್ವಾಮಿ ಅವರು ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ.
ನಾಯಕಿ ಶುಭಾ ಸತೀಶ್ ಅವರ ಸಮರ್ಥ ನಾಯಕತ್ವ, ತಂಡದ ಎಲ್ಲ ಆಟಗಾರ್ತಿಯರ ಸಂಘಟಿತ ಹೋರಾಟ ಮತ್ತು ಕಠಿಣ ಪರಿಶ್ರಮದಿಂದ ಈ ಐತಿಹಾಸಿಕ ಸಾಧನೆ ಸಾಧ್ಯವಾಗಿದೆ. ಇದು ಇಡೀ ಕರುನಾಡಿಗೆ ಹೆಮ್ಮೆಯ ಕ್ಷಣವಾಗಿದೆ ಎಂದು ಅವರು ಬಣ್ಣಿಸಿದ್ದಾರೆ.
ಸರ್ಕಾರಕ್ಕೆ ಮನವಿ:
ರಾಜ್ಯದ ಮಹಿಳಾ ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂತಹ ಇನ್ನಷ್ಟು ಅಮೋಘ ಸಾಧನೆಗಳನ್ನು ಮಾಡಲು ರಾಜ್ಯ ಸರ್ಕಾರವು ಮಹಿಳಾ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಮೂಲಸೌಕರ್ಯ, ಆರ್ಥಿಕ ನೆರವು ಹಾಗೂ ಸೂಕ್ತ ಪ್ರೋತ್ಸಾಹದ ಮೂಲಕ ಸರ್ಕಾರ ಇನ್ನಷ್ಟು ಉತ್ತೇಜನ ನೀಡಬೇಕೆಂದು ತೇಜಸ್ವಿ ನಾಗಲಿಂಗಸ್ವಾಮಿ ಅವರು ಒತ್ತಾಯಿಸಿದ್ದಾರೆ..