
ಖಾಸಗಿ ಕ್ಷೇತ್ರದ ಆತಿಥ್ಯ ಪರಿಣತಿಯೊಂದಿಗೆ ಪ್ರವಾಸೋದ್ಯಮ ಇಲಾಖೆ ಹೋಟೆಲ್‌ಗಳ ಉನ್ನತೀಕರಣಕ್ಕೆ ಸರ್ಕಾರದ ನಿರ್ಧಾರ: ಸಚಿವ ಕೆ.ಜೆ. ಜಾರ್ಜ್
- ನಂದಿಗಿರಿಧಾಮದಲ್ಲಿ ಕೆಎಸ್‌ಟಿಡಿಸಿಯ ನೂತನ 'ಮಯೂರ ಸನ್‌ರೈಸ್ ರೆಸ್ಟೋರೆಂಟ್' ಉದ್ಘಾಟನೆ
- ಸರ್ಕಾರಿ ಆತಿಥ್ಯ ಕ್ಷೇತ್ರಕ್ಕೆ ವೃತ್ತಿಪರ ಆತಿಥ್ಯ ನಿರ್ವಹಣೆಯ ಅತ್ಯುತ್ತಮ ಪದ್ಧತಿಗಳ ಅಳವಡಿಕೆ
- ಮಧ್ಯಮ ವರ್ಗದ ಪ್ರವಾಸಿಗರಿಗೂ ಕೈಗೆಟಕುವ ದರದಲ್ಲಿ ಗುಣಮಟ್ಟದ ಆತಿಥ್ಯ ಒದಗಿಸುವ ಗುರಿ
- ನಂದಿಬೆಟ್ಟದ ಸಂಚಾರ ದಟ್ಟಣೆಗೆ ರೋಪ್‌ವೇ ಹಾಗೂ ಸಮಗ್ರ ಪಾರ್ಕಿಂಗ್ ಯೋಜನೆ
ಬೆಂಗಳೂರು/ನಂದಿಗಿರಿಧಾಮ, ಜುಲೈ 22* : ರಾಜ್ಯದ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಜಾಗತಿಕ ಗುಣಮಟ್ಟಕ್ಕೆ ಏರಿಸುವ ಉದ್ದೇಶದಿಂದ, ಕರ್ನಾಟಕ ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಯಲ್ಲಿರುವ ಮಯೂರ ಹೋಟೆಲ್‌ಗಳು ಹಾಗೂ ಇತರೆ ಆತಿಥ್ಯ ಕೇಂದ್ರಗಳನ್ನು ಖಾಸಗಿ ಆತಿಥ್ಯ ಕ್ಷೇತ್ರದ ಪರಿಣತಿ ಮತ್ತು ಅತ್ಯುತ್ತಮ ನಿರ್ವಹಣಾ ಪದ್ಧತಿಗಳನ್ನು ಅಳವಡಿಸಿಕೊಂಡು ಹಂತ ಹಂತವಾಗಿ ಉನ್ನತೀಕರಿಸಲಾಗುವುದು *ಎಂದು ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಅವರು ಇಂದು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗಿರಿಧಾಮದಲ್ಲಿ ಕೆಎಸ್‌ಟಿಡಿಸಿಯಿಂದ ನಿರ್ಮಿಸಲಾದ ನೂತನ 'ಮಯೂರ ಸನ್‌ರೈಸ್ ರೆಸ್ಟೋರೆಂಟ್' ಉದ್ಘಾಟಿಸಿ ಮಾತನಾಡಿದರು.
ರಾಜ್ಯದ ಅತ್ಯಂತ ಸುಂದರ ಹಾಗೂ ಪ್ರಮುಖ ಪ್ರವಾಸಿ ತಾಣಗಳಲ್ಲಿ ಕೆಎಸ್‌ಟಿಡಿಸಿ ಹಾಗೂ ಜಂಗಲ್ ಲಾಡ್ಜ್‌ಸ್ ಆ್ಯಂಡ್ ರೆಸಾರ್ಟ್ಸ್ ಆಸ್ತಿಗಳಿದ್ದರೂ, ಅವುಗಳ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವ ಅಗತ್ಯವಿದೆ. ಉತ್ತಮ ನಿರ್ವಹಣೆ, ಆಧುನಿಕ ಸೌಲಭ್ಯಗಳು, ವೃತ್ತಿಪರ ಆತಿಥ್ಯ ಸೇವೆಗಳು ಹಾಗೂ ಅಂತರರಾಷ್ಟ್ರೀಯ ಮಟ್ಟದ ಕಾರ್ಯಾಚರಣಾ ಪದ್ಧತಿಗಳನ್ನು ಅಳವಡಿಸುವ ಮೂಲಕ ಈ ಆಸ್ತಿಗಳಿಗೆ ಹೊಸ ಮೆರುಗು ನೀಡಲಾಗುವುದು ಎಂದು ಸಚಿವರು ಹೇಳಿದರು.
ಚಿಕ್ಕಮಗಳೂರಿನಲ್ಲಿ ಪ್ರವಾಸೋದ್ಯಮ ಇಲಾಖೆ ಮತ್ತು ತಾಜ್ ಸಂಸ್ಥೆಯ ಸಹಯೋಗದ ಅನುಭವವು ಸರ್ಕಾರಿ ಆತಿಥ್ಯ ಕ್ಷೇತ್ರದಲ್ಲಿ ವೃತ್ತಿಪರ ನಿರ್ವಹಣೆಯ ಮಹತ್ವವನ್ನು ತೋರಿಸಿದೆ. ಇದೇ ಅನುಭವದ ಆಧಾರದ ಮೇಲೆ ರಾಜ್ಯದ ಇತರೆ ಪ್ರಮುಖ ಪ್ರವಾಸಿ ತಾಣಗಳಲ್ಲಿರುವ ಮಯೂರ ಹೋಟೆಲ್‌ಗಳು ಮತ್ತು ಪ್ರವಾಸೋದ್ಯಮ ಇಲಾಖೆಯ ಆಸ್ತಿಗಳಲ್ಲಿ ಖಾಸಗಿ ಆತಿಥ್ಯ ಕ್ಷೇತ್ರದ ಅತ್ಯುತ್ತಮ ಕಾರ್ಯಪದ್ಧತಿಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
"ಪ್ರೀಮಿಯಂ ಆತಿಥ್ಯ ಸೇವೆಗಳು ಕೇವಲ ಐಷಾರಾಮಿ ಪ್ರವಾಸಿಗರಿಗೆ ಮಾತ್ರ ಸೀಮಿತವಾಗಬಾರದು. ಉತ್ತಮ ಗುಣಮಟ್ಟದ ವಸತಿ, ಆಹಾರ ಹಾಗೂ ಸೇವೆಗಳು ಮಧ್ಯಮ ವರ್ಗದ ಕುಟುಂಬಗಳಿಗೂ ಕೈಗೆಟಕುವ ದರದಲ್ಲಿ ದೊರೆಯಬೇಕು. ಪ್ರವಾಸೋದ್ಯಮವನ್ನು ಜನಸ್ನೇಹಿಯಾಗಿ ಹಾಗೂ ಎಲ್ಲರಿಗೂ ಲಭ್ಯವಾಗುವಂತೆ ರೂಪಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ," ಎಂದು ಸಚಿವರು ಹೇಳಿದರು.
ಮಯೂರ ಹೋಟೆಲ್‌ಗಳ ಉನ್ನತೀಕರಣಕ್ಕೆ ಸಂಬಂಧಿಸಿದಂತೆ ದೇಶದ ಪ್ರಮುಖ ಹೋಟೆಲ್ ಉದ್ಯಮಿಗಳು, ಆತಿಥ್ಯ ಕ್ಷೇತ್ರದ ಪರಿಣಿತರು ಹಾಗೂ ಪ್ರವಾಸೋದ್ಯಮ ತಜ್ಞರನ್ನು ಒಳಗೊಂಡ ಸಲಹಾ ಸಮಿತಿಯನ್ನು ರಚಿಸಲಾಗುವುದು ಎಂದರು.
ಈ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಮಯೂರ ಹೋಟೆಲ್‌ಗಳ ವಿನ್ಯಾಸ, ಕೊಠಡಿ ಸೌಲಭ್ಯಗಳು, ಆಹಾರ ಸೇವೆ, ಕಾರ್ಯಾಚರಣೆ, ಅತಿಥಿ ಸೇವೆ ಹಾಗೂ ನಿರ್ವಹಣಾ ಗುಣಮಟ್ಟವನ್ನು ಹಂತ ಹಂತವಾಗಿ ಉನ್ನತೀಕರಿಸಲಾಗುವುದು. ಹೋಟೆಲ್‌ಗಳ ಮಾಲೀಕತ್ವ ಸರ್ಕಾರದ ಬಳಿಯೇ ಮುಂದುವರಿಯಲಿದ್ದು, ಖಾಸಗಿ ಆತಿಥ್ಯ ಕ್ಷೇತ್ರದ ಪರಿಣತಿಯನ್ನು ಮಾತ್ರ ಬಳಸಿಕೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ನಂದಿಬೆಟ್ಟದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ಕುರಿತು ಮಾತನಾಡಿದ ಸಚಿವರು, ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಬೆಟ್ಟದ ಮೇಲ್ಭಾಗಕ್ಕೆ ಖಾಸಗಿ ವಾಹನಗಳ ಪ್ರವೇಶವನ್ನು ನಿಯಂತ್ರಿಸಿ, ಕೆಳಭಾಗದಲ್ಲಿಯೇ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಅಭಿವೃದ್ಧಿಪಡಿಸಲು ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ಹೇಳಿದರು.
ಅಲ್ಲಿಂದ ಪ್ರವಾಸಿಗರ ಸಂಚಾರಕ್ಕಾಗಿ ನಿಯೋಜಿತ ವಾಹನಗಳ ವ್ಯವಸ್ಥೆ ಕಲ್ಪಿಸಲಾಗುವುದು. ಜೊತೆಗೆ, ಬಹುನಿರೀಕ್ಷಿತ ನಂದಿಬೆಟ್ಟ ರೋಪ್‌ವೇ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸುವ ಮೂಲಕ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ಒದಗಿಸಲಾಗುವುದು ಎಂದು ಅವರು ಹೇಳಿದರು.
ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆ, ಗುಣಮಟ್ಟದ ಸೇವೆ ಹಾಗೂ ಪ್ರವಾಸಿಗರೊಂದಿಗೆ ಸೌಜನ್ಯದ ವರ್ತನೆಗೆ ಅತ್ಯುನ್ನತ ಆದ್ಯತೆ ನೀಡಬೇಕು. 'ಅತಿಥಿ ದೇವೋ ಭವ' ಎಂಬ ಭಾರತೀಯ ಆತಿಥ್ಯ ಸಂಸ್ಕೃತಿಯೇ ನಮ್ಮ ಸೇವೆಯ ಮೂಲಮಂತ್ರವಾಗಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
*ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ,* ಸರ್ಕಾರಿ ಆತಿಥ್ಯ ಕ್ಷೇತ್ರದ ಗುರುತನ್ನು ಉಳಿಸಿಕೊಂಡೇ, ಖಾಸಗಿ ಆತಿಥ್ಯ ಕ್ಷೇತ್ರದ ಪರಿಣತಿ, ಸೇವಾ ಗುಣಮಟ್ಟ ಹಾಗೂ ನಿರ್ವಹಣಾ ಕಾರ್ಯಪದ್ಧತಿಗಳನ್ನು ಅಳವಡಿಸಿಕೊಂಡು ಮಯೂರ ಹೋಟೆಲ್‌ಗಳನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುವ ಗುರಿಯನ್ನು ಇಲಾಖೆ ಹೊಂದಿದೆ ಎಂದು ತಿಳಿಸಿದರು.
ನಂದಿಬೆಟ್ಟ ರೋಪ್‌ವೇ ಯೋಜನೆ ಇಲಾಖೆಯ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ಯೋಜನೆಗೆ ಅಗತ್ಯವಿರುವ ಅರಣ್ಯ ಇಲಾಖೆಯ ಅನುಮತಿ ಪಡೆಯುವ ಪ್ರಕ್ರಿಯೆಯನ್ನು ವೇಗಗೊಳಿಸಲಾಗಿದ್ದು, ಸಚಿವರ ನಿರ್ದೇಶನದಂತೆ ದೆಹಲಿಯಲ್ಲಿ ವಿಶೇಷ ಸಮನ್ವಯ ವ್ಯವಸ್ಥೆ ರೂಪಿಸಲಾಗಿದೆ. ಅಗತ್ಯ ಅನುಮತಿಗಳನ್ನು ಶೀಘ್ರದಲ್ಲೇ ಪಡೆದು ಯೋಜನೆಯನ್ನು ಅನುಷ್ಠಾನದ ಹಂತಕ್ಕೆ ತರಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಶ್ರೀನಿವಾಸ್, ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಪ್ರವಾಸೋದ್ಯಮ ಇಲಾಖೆ ಆಯುಕ್ತ ಶಿವಪ್ರಸಾದ್ ಪಿ.ಆರ್. ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಎಸ್.ಜಾನಕಿ ಅವರ ನಿಧನಕ್ಕೆ ಬಸವಶ್ರೀ ಯೋಗಿಪ್ರಭುಗಳ ಸಂತಾಪ
ಮೈಸೂರು: ಗಾನ ಕೋಗಿಲೆ ಎಸ್.ಜಾನಕಿ ಅವರ ನಿಧನಕ್ಕೆ ಬಸವಶ್ರೀ ಯೋಗಿಪ್ರಭುಗಳು ತೀವ್ರ
ಸಂತಾಪ ವ್ಯಕ್ತಪಡಿಸಿದ್ದಾರೆ.
ವಿನಯ, ಸರಳತೆ, ಆದ್ಯಾತ್ಮ ಅಳವಡಿಸಿಕೊಂಡು ಬದುಕಿ ಮಾದರಿ ಯಾಗಿದ್ದಾರೆ ತಮ್ಮ ಗಾಯನದ
ಮೂಲಕ ಕನ್ನಡ ಚಿತ್ರರಂಗಕ್ಕೆ ಜೀವ ತುಂಬಿದ ಗಾಯನ ಮಾತೆ ಎಂದು ಶ್ರೀಗಳು ಬಣ್ಣಿಸಿದ್ದಾರೆ.
ಎಸ್ ಜಾನಕಿ ಅವರ ಆತ್ಮಕ್ಕೆ ಸದ್ಗತಿ ಸಿಗಲಿ. ಮೈಸೂರಿನಲ್ಲಿ ಕರ್ನಾಟಕ ರತ್ನ ಡಾ. ವಿಷ್ಣುವರ್ಧನ್ ಅವರ
ಸ್ಮಾರಕ ವಿದೆ ಇದು ಮೈಸೂರು ನಗರಕ್ಕೆ ಮೆರುಗು ತಂದು ಕೊಟ್ಟಿದೆ,ಅದರಂತೆ ಮೈಸೂರಲ್ಲಿ ಎಸ್ ಜಾನಕಿ
ಮತ್ತು ವಿಷ್ಣುವರ್ಧನ್ ಅವರ ಹೆಸರಿನಲ್ಲಿ ಫಿಲಂ ಸಿಟಿ ನಿರ್ಮಾಣ ಮಾಡಿ ಸಾಂಸ್ಕೃತಿಕ ಕಲೆಗಳನ್ನು ನಾಡಿಗೆ ತಿಳಿಸುವ ಕಾರ್ಯವನ್ನು ಕರ್ನಾಟಕ ಸರ್ಕಾರ ಮಾಡಲಿ ಎಂದು ಬಸವಶ್ರೀ ಯೋಗಿಪ್ರಭುಗಳು ಸಲಹೆ ನೀಡಿದ್ದಾರೆ.
ಸಿನಿಮಾ ನಟರು, ಗಾಯಕರು ಹಾಗೂ ಚಿತ್ರರಂಗದವರು ಎಸ್ ಜಾನಕಿ ಅಮ್ಮನವರನ್ನು ನೋಡಿ ಕನ್ನಡ ನಾಡು ನುಡಿಯ ಮೇಲೆ ಪ್ರೀತಿ ಬೆಳೆಸಿಕೊಳ್ಳಬೇಕು. ಸುಮಾರು ನಲ್ವತ್ತು ಸಾವಿರ ಹಾಡುಗಳನ್ನು ಎಲ್ಲಾ ಭಾಷೆಯಲ್ಲೂ ಹಾಡಿ ನಾಡಿನ ಜನರ ಮನಸುಗಳಲ್ಲಿ ಉಳಿದಿದ್ದಾರೆ. ನಾಲ್ಕೈಯ್ದು ಹಾಡುಗಳನ್ನು ಹಾಡಿದ ಕೂಡಲೇ ಅಹಂಕಾರ ತುಂಬಿಕೊಂಡು ನಡೆಯುವವರು ಎಸ್ ಜಾನಕಮ್ಮನ ನೋಡಿ ಕಲಿಯಬೇಕು ಎಂದು ಶ್ರೀಗಳು ತಿಳಿಸಿದ್ದಾರೆ.
ಸಾಂಸ್ಕೃತಿಕ ನಗರಿ ಮೈಸೂರು ನಿಜಕ್ಕೂ ಪುಣ್ಯ ಮಾಡಿದೆ, ಎಸ್ ಜಾನಕಿ ಮೈಸೂರಲ್ಲಿ ಕೊನೆಯ
ದಿನಗಳನ್ನು ಕಳೆಯ ಬಯಸಿ ಮತ್ತು ಈ ಮಣ್ಣಿನಲ್ಲೇ ಪ್ರಾಣ ಅರ್ಪಿಸಿದ್ದು ಮೈಸೂರಿಗೆ ಸಿಕ್ಕ ಮತ್ತೊಂದು
ಗರಿ ಎಂದು ಬಸವಶ್ರೀ ಯೋಗಿಪ್ರಭುಗಳು ಹೇಳಿದ್ದಾರೆ.

ಮಕ್ಕಳ ಸಹಾಯವಾಣಿ 1098'ರ ಸದುಪಯೋಗಕ್ಕೆ ಕರೆ: ಕಾರ್ನರ್ ಸ್ಟೋನ್ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ*
ಕೊಳ್ಳೇಗಾಲ:ಪಟ್ಟಣದ ಕಾರ್ನರ್ ಸ್ಟೋನ್ ಪದವಿ ಪೂರ್ವ ಕಾಲೇಜಿನಲ್ಲಿ ದಿನಾಂಕ 20 ಜುಲೈ 2026ರಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಕ್ಕಳ ಸಹಾಯವಾಣಿ 1098 ಚಾಮರಾಜನಗರ ಜಿಲ್ಲೆ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ಕೊಳ್ಳೇಗಾಲ ತಾಲೂಕು ವಕೀಲರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಪೋಕ್ಶೋ ಬಾಲ್ಯ ವಿವಾಹ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಕಾನೂನು ಅರಿವು ಕಾರ್ಯಕ್ರಮವನ್ನು ಏರ್ಪಡಿಸಲಾಯಿತು
ಈ ಕಾರ್ಯಕ್ರಮವನ್ನು ಕೊಳ್ಳೇಗಾಲದ ಗೌರವಾನ್ವಿತ ಅಪರ ಸಿವಿಲ್ ನ್ಯಾಯಾಧೀಶರಾದ ಶ್ರೀ ಎಂ ರಂಜಿತ್ ಕುಮಾರ್ ರವರು ಉದ್ಘಾಟಿಸಿ ಪೋಕ್ಸೋ ಕಾಯ್ದೆಗೆ ಸಂಬಂಧಪಟ್ಟ ಸಂಪೂರ್ಣ ವಿವರವನ್ನು ಸವಿಸ್ತಾರವಾಗಿ ವಿದ್ಯಾರ್ಥಿಗಳಿಗೆ ತಿಳಿಹೇಳಿದರು ಇದೇ ಸಂದರ್ಭದಲ್ಲಿ ಕಾಲೇಜಿನ ಯುವಕ ಯುವತಿಯರು ಯಾವುದೇ ವ್ಯಾಮೋಹಕ್ಕೆ ಒಳಗಾಗದೆ ಕಾನೂನಿನ ಅರಿವನ್ನು ಮೂಡಿಸಿಕೊಂಡು ಯಾವುದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸದೆ ಎಚ್ಚರಿಕೆಯಿಂದ ಇರುವಂತೆ ತಿಳಿಸಿದರು. ಈ ಕಾರ್ಯಕ್ರಮವನ್ನು ಕೊಳ್ಳೇಗಾಲದ ಗೌರವಾನ್ವಿತ ಅಪರ ಸಿವಿಲ್ ನ್ಯಾಯಾಧೀಶರಾದ ಶ್ರೀ ಎಂ ರಂಜಿತ್ ಕುಮಾರ್ ರವರು ಉದ್ಘಾಟಿಸಿ ಪೋಕ್ಸೋ ಕಾಯ್ದೆಗೆ ಸಂಬಂಧಪಟ್ಟ ಸಂಪೂರ್ಣ ವಿವರವನ್ನು ಸವಿಸ್ತಾರವಾಗಿ ವಿದ್ಯಾರ್ಥಿಗಳಿಗೆ ತಿಳಿಹೇಳಿದರು ಇದೇ ಸಂದರ್ಭದಲ್ಲಿ ಕಾಲೇಜಿನ ಯುವಕ ಯುವತಿಯರು ಯಾವುದೇ ವ್ಯಾಮೋಹಕ್ಕೆ ಒಳಗಾಗದೆ ಕಾನೂನಿನ ಅರಿವನ್ನು ಮೂಡಿಸಿಕೊಂಡು ಯಾವುದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸದೆ ಎಚ್ಚರಿಕೆಯಿಂದ ಇರುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕೊಳ್ಳೇಗಾಲದ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಎನ್ ಬಸವರಾಜು ರವರು ವಿದ್ಯಾರ್ಥಿಗಳಿಗೆ ಬಾಲ್ಯ ವಿವಾಹದಿಂದ ಆಗಬಹುದಾದ ತೊಂದರೆಗಳನ್ನು ಹಾಗೂ ಅದನ್ನು ತಪ್ಪಿಸಲು ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು ಅಲ್ಲದೆ ಬಾಲ್ಯ ವಿವಾಹ ಕಾಯ್ದೆ ಅನ್ವಯ ಆಗಬಹುದಾದಂತ ಶಿಕ್ಷೆಗಳ ಬಗ್ಗೆ ಮಕ್ಕಳಿಗೆ ವಿವರಿಸಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ಕೊಳ್ಳೇಗಾಲದ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಎನ್ ಬಸವರಾಜು ರವರು ವಿದ್ಯಾರ್ಥಿಗಳಿಗೆ ಬಾಲ್ಯ ವಿವಾಹದಿಂದ ಆಗಬಹುದಾದ ತೊಂದರೆಗಳನ್ನು ಹಾಗೂ ಅದನ್ನು ತಪ್ಪಿಸಲು ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು ಅಲ್ಲದೆ ಬಾಲ್ಯ ವಿವಾಹ ಕಾಯ್ದೆ ಅನ್ವಯ ಆಗಬಹುದಾದಂತ ಶಿಕ್ಷೆಗಳ ಬಗ್ಗೆ ಮಕ್ಕಳಿಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಿರಿಯ ವಕೀಲರಾದ ಶ್ರೀ ನಾಗರಾಜುರವರು ಹಿಂದಿನ ಯುವ ಪೀಳಿಗೆಯ ಮಾದಕ ವಸ್ತುಗಳಿಗೆ ಹಾಗೂ ಚಟಗಳಿಗೆ ಬಲಿಯಾಗಿ ಅನುಭವಿಸುತ್ತಿರುವ ಪ್ರಸಂಗಗಳನ್ನು ನೈಜ ಘಟನೆಗಳ ಮೂಲಕ ಮಕ್ಕಳ ಮುಂದೆ ಪ್ರಸ್ತುತಪಡಿಸಿದರು ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳನ್ನು ಎಳೆಯಳೆಯಾಗಿ ವಿವರಿಸಿದರು ಹಾಗೂ ಇಂದಿನ ಯುವ ಜನಾಂಗವು ಯಾವುದೇ ಕಾರಣಕ್ಕೂ ಮಾದಕ ವಸ್ತುಗಳಿಗೆ ಬಲಿಯಾಗದಂತೆ ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಿರಿಯ ವಕೀಲರಾದ ಶ್ರೀ ನಾಗರಾಜುರವರು ಹಿಂದಿನ ಯುವ ಪೀಳಿಗೆಯ ಮಾದಕ ವಸ್ತುಗಳಿಗೆ ಹಾಗೂ ಚಟಗಳಿಗೆ ಬಲಿಯಾಗಿ ಅನುಭವಿಸುತ್ತಿರುವ ಪ್ರಸಂಗಗಳನ್ನು ನೈಜ ಘಟನೆಗಳ ಮೂಲಕ ಮಕ್ಕಳ ಮುಂದೆ ಪ್ರಸ್ತುತಪಡಿಸಿದರು ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳನ್ನು ಎಳೆಯಳೆಯಾಗಿ ವಿವರಿಸಿದರು ಹಾಗೂ ಇಂದಿನ ಯುವ ಜನಾಂಗವು ಯಾವುದೇ ಕಾರಣಕ್ಕೂ ಮಾದಕ ವಸ್ತುಗಳಿಗೆ ಬಲಿಯಾಗದಂತೆ ಎಚ್ಚರಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಿರಿಯ ವಕೀಲರಾದ ಶ್ರೀ ನಾಗರಾಜುರವರು ಹಿಂದಿನ ಯುವ ಪೀಳಿಗೆಯ ಮಾದಕ ವಸ್ತುಗಳಿಗೆ ಹಾಗೂ ಚಟಗಳಿಗೆ ಬಲಿಯಾಗಿ ಅನುಭವಿಸುತ್ತಿರುವ ಪ್ರಸಂಗಗಳನ್ನು ನೈಜ ಘಟನೆಗಳ ಮೂಲಕ ಮಕ್ಕಳ ಮುಂದೆ ಪ್ರಸ್ತುತಪಡಿಸಿದರು ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳನ್ನು ಎಳೆಯಳೆಯಾಗಿ ವಿವರಿಸಿದರು ಹಾಗೂ ಇಂದಿನ ಯುವ ಜನಾಂಗವು ಯಾವುದೇ ಕಾರಣಕ್ಕೂ ಮಾದಕ ವಸ್ತುಗಳಿಗೆ ಬಲಿಯಾಗದಂತೆ ಎಚ್ಚರಿಸಿದರು.
ನಂತರ ಮಾತನಾಡಿದ ಚಾಮರಾಜನಗರ ಜಿಲ್ಲೆ ಮಕ್ಕಳ ಸಹಾಯವಾಣಿ 1098 ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮೇಲ್ವಿಚಾರಕರಾದ ಶ್ರೀ ಮಹೇಶ್ ರವರು 0 ಯಿಂದ 18 ವರ್ಷದ ಒಳಗಿನ ಎಲ್ಲಾ ಮಕ್ಕಳು ತಮಗಾಗುವ ಎಂತಹದೇ ತೊಂದರೆಗಳನ್ನು ಅಥವಾ ಅಳಲುಗಳನ್ನು ಮಕ್ಕಳ ಸಹಾಯವಾಣಿ ಯಾಗಿರುವ 1098 ಸಂಖ್ಯೆಗೆ ಕರೆಮಾಡುವ ಮೂಲಕ ದೂರುಗಳನ್ನು ಸಲ್ಲಿಸಬಹುದು ಎಂಬ ಸಲಹೆಯನ್ನು ನೀಡಿದರು ಅಂತೆಯೇ ಮಕ್ಕಳ ಸಹಾಯವಾಣಿ ಸಂಖ್ಯೆಯನ್ನು ದುರುಪಯೋಗ ಮಾಡಿಕೊಳ್ಳದಂತೆಯೂ ಎಚ್ಚರಿಸಿದರು.
ನಂತರ ಮಾತನಾಡಿದ ಚಾಮರಾಜನಗರ ಜಿಲ್ಲೆ ಮಕ್ಕಳ ಸಹಾಯವಾಣಿ 1098 ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮೇಲ್ವಿಚಾರಕರಾದ ಶ್ರೀ ಮಹೇಶ್ ರವರು 0 ಯಿಂದ 18 ವರ್ಷದ ಒಳಗಿನ ಎಲ್ಲಾ ಮಕ್ಕಳು ತಮಗಾಗುವ ಎಂತಹದೇ ತೊಂದರೆಗಳನ್ನು ಅಥವಾ ಅಳಲುಗಳನ್ನು ಮಕ್ಕಳ ಸಹಾಯವಾಣಿ ಯಾಗಿರುವ 1098 ಸಂಖ್ಯೆಗೆ ಕರೆಮಾಡುವ ಮೂಲಕ ದೂರುಗಳನ್ನು ಸಲ್ಲಿಸಬಹುದು ಎಂಬ ಸಲಹೆಯನ್ನು ನೀಡಿದರು ಅಂತೆಯೇ ಮಕ್ಕಳ ಸಹಾಯವಾಣಿ ಸಂಖ್ಯೆಯನ್ನು ದುರುಪಯೋಗ ಮಾಡಿಕೊಳ್ಳದಂತೆಯೂ ಎಚ್ಚರಿಸಿದರು.
ನಂತರ ಮಾತನಾಡಿದ ಚಾಮರಾಜನಗರ ಜಿಲ್ಲೆ ಮಕ್ಕಳ ಸಹಾಯವಾಣಿ 1098 ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮೇಲ್ವಿಚಾರಕರಾದ ಶ್ರೀ ಮಹೇಶ್ ರವರು 0 ಯಿಂದ 18 ವರ್ಷದ ಒಳಗಿನ ಎಲ್ಲಾ ಮಕ್ಕಳು ತಮಗಾಗುವ ಎಂತಹದೇ ತೊಂದರೆಗಳನ್ನು ಅಥವಾ ಅಳಲುಗಳನ್ನು ಮಕ್ಕಳ ಸಹಾಯವಾಣಿ ಯಾಗಿರುವ 1098 ಸಂಖ್ಯೆಗೆ ಕರೆಮಾಡುವ ಮೂಲಕ ದೂರುಗಳನ್ನು ಸಲ್ಲಿಸಬಹುದು ಎಂಬ ಸಲಹೆಯನ್ನು ನೀಡಿದರು ಅಂತೆಯೇ ಮಕ್ಕಳ ಸಹಾಯವಾಣಿ ಸಂಖ್ಯೆಯನ್ನು ದುರುಪಯೋಗ ಮಾಡಿಕೊಳ್ಳದಂತೆಯೂ ಎಚ್ಚರಿಸಿದರು.ನಂತರ ಮಾತನಾಡಿದ ಚಾಮರಾಜನಗರ ಜಿಲ್ಲೆ ಮಕ್ಕಳ ಸಹಾಯವಾಣಿ 1098 ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮೇಲ್ವಿಚಾರಕರಾದ ಶ್ರೀ ಮಹೇಶ್ ರವರು 0 ಯಿಂದ 18 ವರ್ಷದ ಒಳಗಿನ ಎಲ್ಲಾ ಮಕ್ಕಳು ತಮಗಾಗುವ ಎಂತಹದೇ ತೊಂದರೆಗಳನ್ನು ಅಥವಾ ಅಳಲುಗಳನ್ನು ಮಕ್ಕಳ ಸಹಾಯವಾಣಿ ಯಾಗಿರುವ 1098 ಸಂಖ್ಯೆಗೆ ಕರೆಮಾಡುವ ಮೂಲಕ ದೂರುಗಳನ್ನು ಸಲ್ಲಿಸಬಹುದು ಎಂಬ ಸಲಹೆಯನ್ನು ನೀಡಿದರು ಅಂತೆಯೇ ಮಕ್ಕಳ ಸಹಾಯವಾಣಿ ಸಂಖ್ಯೆಯನ್ನು ದುರುಪಯೋಗ ಮಾಡಿಕೊಳ್ಳದಂತೆಯೂ ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ರೋಷನ್ ಪ್ರಿನ್ಸ್ ಹಾಗೂ ಶಿಶು ಅಭಿವೃದ್ಧಿ ಯೋಜನೆಯ ಹಿರಿಯ ಮೇಲ್ವಿಚಾರಕರು ಆದ ಶ್ರೀಮತಿ ಶಿವಲೀಲಾ ರವರು ಹಾಗೂ ಮಹಿಳಾ ಸಹಾಯವಾಣಿಯ ಪೊಲೀಸ್ ಸಿಬ್ಬಂದಿಗಳು ಕಾಲೇಜಿನ ಉಪನ್ಯಾಸಕವೃಂದ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ರೋಷನ್ ಪ್ರಿನ್ಸ್ ಹಾಗೂ ಶಿಶು ಅಭಿವೃದ್ಧಿ ಯೋಜನೆಯ ಹಿರಿಯ ಮೇಲ್ವಿಚಾರಕರು ಆದ ಶ್ರೀಮತಿ ಶಿವಲೀಲಾ ರವರು ಹಾಗೂ ಮಹಿಳಾ ಸಹಾಯವಾಣಿಯ ಪೊಲೀಸ್ ಸಿಬ್ಬಂದಿಗಳು ಕಾಲೇಜಿನ ಉಪನ್ಯಾಸಕವೃಂದ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರುಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ರೋಷನ್ ಪ್ರಿನ್ಸ್ ಹಾಗೂ ಶಿಶು ಅಭಿವೃದ್ಧಿ ಯೋಜನೆಯ ಹಿರಿಯ ಮೇಲ್ವಿಚಾರಕರು ಆದ ಶ್ರೀಮತಿ ಶಿವಲೀಲಾ ರವರು ಹಾಗೂ ಮಹಿಳಾ ಸಹಾಯವಾಣಿಯ ಪೊಲೀಸ್ ಸಿಬ್ಬಂದಿಗಳು ಕಾಲೇಜಿನ ಉಪನ್ಯಾಸಕವೃಂದ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು

ಕೀಲು ಮತ್ತು ಮೂಳೆ ವ್ಯಾಧಿಗಳು ಹಾಗೂ ವಯೋಮಿತ್ರ ಶಿಬರ
ದಿನಾಂಕ: 28 ಜುಲೈ 2026, ಮಂಗಳವಾರ ತರೀಕೆರೆ ಅಂಬೇಡ್ಕರ್ ಭವನದಲ್ಲಿ ,ಕೀಲು ಮತ್ತು ಮೂಳೆ ವ್ಯಾಧಿಗಳ
ಶಿಬರ ಆಯೋಜಿಸಲಾಯಿತು
ಕಾರ್ಯಕ್ರಮವನ್ನು ಶ್ರೀಮತಿ,ವಾಣಿ ಶ್ರೀನಿವಾಸ್ ಉದ್ಘಾಟಿಸಿದರು ಹಿರಿಯರ ಆರೋಗ್ಯ ರಕ್ಷಣೆಯ ಉದ್ದೇಶದಿಂದ ಆಯೋಜಿಸಿರುವ ಈ ವಿಶಿಷ್ಟ ವೈದ್ಯಕೀಯ ಶಿಬಿರವು ನಿಜಕ್ಕೂ ಶ್ಲಾಘನೀಯ. ಹಿರಿಯರೆಲ್ಲರೂ ನೋವುಮುಕ್ತ ಹಾಗೂ ನೆಮ್ಮದಿಯ ಜೀವನವನ್ನು ನಡೆಸಲಿ. ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಉದ್ದೇಶಿಸಿ ಮಾತನಾಡಿದರು
ಕರ್ನಾಟಕ ಸರ್ಕಾರ, ಆಯುಷ್ ಇಲಾಖೆ ಚಿಕ್ಕಮಗಳೂರು, ಹಾಗೂ ತಾಲೂಕು ಆಡಳಿತ, ಪುರಸಭೆ, ಸರ್ಕಾರಿ ಆಯುರ್ವೇದ ಆಸ್ಪತ್ರೆ, ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಮತ್ತು ಮಮತಾ ಮಹಿಳಾ ಸಮಾಜ, ತರೀಕೆರೆ. ಇವರಿಂದ ಕಾರ್ಯಕ್ರಮ ಆಯೋಜಿಸಲಾಯಿತು
ಶಿಬರದಲ್ಲಿ ಉಚಿತ ತಪಾಸಣೆ,ಚಿಕಿತ್ಸೆ ಮತ್ತು ಔಷಧಿ ಶಿಬಿರದಲ್ಲಿ ಸುಮಾರು 150ಕ್ಕೂ ಹೆಚ್ಚು ರೋಗಿಗಳಿಗೆ ಉಚಿತ ರಕ್ತದೊತ್ತಡ (ಬಿ.ಪಿ) ಮತ್ತು ಮಧುಮೇಹ (ಸಕ್ಕರೆ ಕಾಯಿಲೆ) ಪರೀಕ್ಷೆಗಳನ್ನು ನಡೆಸಲಾಯಿತು.
ತಜ್ಞ ವೈದ್ಯರುಗಳಿಂದ ಸೂಕ್ತ ತಪಾಸಣೆ ನಡೆಸಿ, ಉತ್ತಮ ಗುಣಮಟ್ಟದ ಔಷಧಿಗಳನ್ನು ಉಚಿತವಾಗಿ ವಿತರಿಸಲಾಯಿತು
ಕೀಲು ಮತ್ತು ಮೂಳೆ ರೋಗಗಳನ್ನು ನಿಯಂತ್ರಿಸಲು ಸಹಕಾರಿಯಾಗುವ ವಿವಿಧ ಯೋಗಾಸನಗಳನ್ನು ಯೋಗ ತರಬೇತುದಾರರಾದ ಜ್ಯೋತಿ ಗೌತಮ್ ಅವರು ಹೇಳಿಕೊಟ್ಟರು.
ಡಾ. ಗೌತಮ್ ಎಲ್. ಆರ್. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು ವಯಸ್ಸಾದಂತೆ ಹಿರಿಯರನ್ನು ಕಾಡುವ ಕೀಲು ಮತ್ತು ಮೂಳೆ ಸಂಬಂಧಿತ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಮಾರ್ಗದರ್ಶನ ನೀಡುವುದು
ಈ ಶಿಬಿರದ ಉದ್ದೇಶ. ಹಿರಿಯರು ನೋವುಮುಕ್ತ, ಸ್ವಾವಲಂಬಿ ಹಾಗೂ ಆರೋಗ್ಯಕರ ಜೀವನ ನಡೆಸಲು ಈ ಉಚಿತ ತಪಾಸಣಾ ಶಿಬಿರವು ನೆರವಾಗಲಿ."
ಶ್ರೀಮತಿ ಡಾ. ಗೀತಾ (ಜಿಲ್ಲಾ ಆಯುಷ್ ಅಧಿಕಾರಿಗಳು)*: "ವಯಸ್ಸಾದಂತೆ ಮೂಳೆ ಸವೆತ ಹಾಗೂ ಕೀಲು ನೋವು ಬರುವುದು ಸಹಜ ಪ್ರಕ್ರಿಯೆ. ಆದರೆ ಸೂಕ್ತ ಚಿಕಿತ್ಸೆ ಮತ್ತು ವ್ಯಾಯಾಮದಿಂದ ಇದನ್ನು ಖಂಡಿತ ನಿಯಂತ್ರಿಸಬಹುದು."
ರೊ. ಕೆ. ಪಿ. ಕುಮಾರ್ (ರೋಟರಿ ಕ್ಲಬ್ ಅಧ್ಯಕ್ಷರು)*:
"ಇಂತಹ ಶಿಬಿರಗಳು ಹಿರಿಯರಿಗೆ ಕೇವಲ ದೈಹಿಕ ಆರೋಗ್ಯವನ್ನಷ್ಟೇ ಅಲ್ಲದೆ, ವಯೋಸಹಜ ಒಂಟಿತನವನ್ನು ದೂರಮಾಡಿ ಮಾನಸಿಕ ಧೈರ್ಯವನ್ನೂ ತುಂಬುತ್ತವೆ."
ಲಯನ್ ಪ್ರದೀಪ್ ಟಿ.ವಿ. (ಲಯನ್ಸ್ ಕ್ಲಬ್ ಅಧ್ಯಕ್ಷರು)*:
"ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವ ವೃದ್ಧರಿಗೆ ಆಸರೆಯಾಗಿ ಉಚಿತ ವೈದ್ಯಕೀಯ ಸೇವೆಗಳನ್ನು ತಂದಿರುವ ಕರ್ನಾಟಕ ಸರ್ಕಾರಕ್ಕೆ ಅಭಿನಂದನೆಗಳು."
ಶ್ರೀಮತಿ ರಾಘವೇಂದ್ರ (ಮಮತಾ ಮಹಿಳಾ ಸಮಾಜದ ಅಧ್ಯಕ್ಷರು)*:
"ಸಣ್ಣಪುಟ್ಟ ಕೀಲು ಅಥವಾ ಮೂಳೆ ನೋವುಗಳಿದ್ದರೂ ನಿರ್ಲಕ್ಷ್ಯ ಮಾಡದೆ, ತಜ್ಞ ವೈದ್ಯರಿಂದ ಸೂಕ್ತ ತಪಾಸಣೆ ಮಾಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಿ."
ಡಾ. ದೊಡ್ಡಗುಣಿ (ಆಡಳಿತ ವೈದ್ಯಾಧಿಕಾರಿಗಳು, ಕಡೂರು)*.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವೈದ್ಯರು*
ಡಾ. ವಿವೇಕಾನಂದ ಬಿರಾದಾರ್
ಡಾ. ಪರಶುರಾಮ್
ಡಾ. ವಿಜಯ ಲಕ್ಷ್ಮಿ
ಡಾ. ಕಾವ್ಯಶ್ರೀ
ಡಾ. ರೇಖಾ
ಡಾ. ಸದಾಶಿವ
ಡಾ. ಕಿಶೋರ್ ಕುಮಾರ್
ಉಪಸ್ಥಿತರಿದ್ದ ಇತರ ಗಣ್ಯರು*
ಆರೋಗ್ಯ ಇಲಾಖೆ*:
ಡಾ. ಚಂದ್ರಶೇಖರ್ (ತಾಲೂಕು ಆರೋಗ್ಯ ಅಧಿಕಾರಿಗಳು),
ಡಾ. ಚನ್ನಬಸಪ್ಪ (ಆಡಳಿತ ವೈದ್ಯಾಧಿಕಾರಿಗಳು, ಸಾರ್ವಜನಿಕ ಆಸ್ಪತ್ರೆ),
ರೋಟರಿ ಕ್ಲಬ್*: ದಯಾನಂದ್ (ಝೋನಲ್ ಲೆಫ್ಟಿನೆಂಟ್), ಪ್ರವೀಣ್ ಪಿ. (ಕಾರ್ಯದರ್ಶಿ), ಜಯರಾಮ್ ಟಿ. (ಪಾಸ್ಟ್ ಪ್ರೆಸಿಡೆಂಟ್), ಗಿರೀಶ್ ಟಿ.ಸಿ. ಮತ್ತು ನಿತಿನ್ ಟಿ.ಜೆ. (ನಿರ್ದೇಶಕರು).
ಲಯನ್ಸ್ ಕ್ಲಬ್*
ಏಜಾಸ್ ಪಾಷಾ (ಕಾರ್ಯದರ್ಶಿ), ರೇವಣ್ಣ ಒಡೆಯರ್ (ಖಜಾಂಜಿ), ಟಿ.ಎಂ. ಹರೀಶ್ (ಪಾಸ್ಟ್ ಪ್ರೆಸಿಡೆಂಟ್), ಎ.ಎಸ್. ಸಾಯಿ ಕುಮಾರ್, ಜಿ.ಎಂ. ಆನಂದಮೂರ್ತಿ ಮತ್ತು ಆದಿಲ್ ಭಾಷಾ (ನಿರ್ದೇಶಕರು).
ಮಮತಾ ಮಹಿಳಾ ಸಮಾಜ*: ರೇಣು ನವೀನ್ (ಕಾರ್ಯದರ್ಶಿಗಳು), ರತ್ನ ಸೋಮಶೇಖರ್, ಸೌಭಾಗ್ಯ ಶ್ರೀರಂಗಪ್ಪ, ಶಾರದಾ ಅಶೋಕ್ .
ಆಸ್ಪತ್ರೆಯ ಸಿಬ್ಬಂದಿಗಳು* : ನಂಜುಂಡೇಶ್, ಮಧು, ಮಂಜುನಾಥ್, ಯಶ್ವಂತ್, ಅರ್ಪಿತ, ಕಮಲ, ನೇತ್ರಾವತಿ, ಅನಿತಾ.
ಕಾರ್ಯಕ್ರಮ ನಿರ್ವಹಣೆ*
ಸ್ವಾಗತ: ಡಾ. ಪರಶುರಾಮ್
ನಿರೂಪಣೆ: ಡಾ. ಕಿಶೋರ್ ಕುಮಾರ್ ಬಿ.ವಿ.
ವಂದನಾರ್ಪಣೆ: ಡಾ. ವಿವೇಕಾನಂದ ಬಿರಾದರ್

ಶಿವಮೊಗ್ಗ ಜಿಲ್ಲೆ ಮಾಳೂರು ಪೊಲೀಸ್ ಠಾಣೆ ಪೊಲೀಸರಿಂದ ಮೋಟಾರ್ ಕೇಬಲ್ ವೈರ್ ಕಳ್ಳನ ಬಂಧನ
ತೀರ್ಥಹಳ್ಳಿ ತಾಲ್ಲೂಕು ನಿಡಗಳಲೆ ಗ್ರಾಮದ ಮುಡುಬಾದಲ್ಲಿ, ಮುಂಡುವಳ್ಳಿ ಗ್ರಾಮದ ಹೊಸಳ್ಳಿಯಲ್ಲಿ ಮತ್ತು ತೂದೂರು ಗ್ರಾಮದ ಬಳಿ ರೈತರು ತಮ್ಮ ತಮ್ಮ ತೋಟಗಳಿಗೆ ನೀರನ್ನು ಹಾಯಿಸಲು ತುಂಗಾ ನದಿಗೆ ಅಳವಡಿಸಿದ ಮೋಟಾರ್ ನ ಕೇಬಲ್ ವೈರು ಕಳ್ಳತನವಾದ ಬಗ್ಗೆ ಕೆಸುವಿನ ಮನೆ ಎನ್ ವೆಂಕಟೇಶ್ ರವರು, ಹೊಸಳ್ಳಿ ವಾಸಿ ರಾಜೇಂದ್ರ ಹೆಚ್ ಎಸ್ ಮತ್ತು ಜಾವಳ್ಳಿ ವಾಸ ಶಶಿಮೋಹನ ರವರು ನೀಡಿದ ದೂರಿನ ಮೇರೆಗೆ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಈ ಮೇಲ್ಕಂಡ ಪ್ರಕರಣಗಳಲ್ಲಿ ಕಳುವಾದ ಮಾಲು ಮತ್ತು ಆರೋಪಿತರ ಪತ್ತೆ ಮಾಡಲು ಶ್ರೀ ನಿಖಿಲ್ ಬಿ ಐಪಿಎಸ್ ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಶ್ರೀ ಕಾರಿಯಪ್ಪ ಎ.ಜಿ ಕೆ.ಎಸ್.ಪಿ.ಎಸ್ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಶಿವಮೊಗ್ಗ ಜಿಲ್ಲೆ, ಶ್ರೀ ಅರವಿಂದ್ ಎನ್ ಕಲಗುಚ್ಚಿ ಮಾನ್ಯ ಪೊಲೀಸ್ ಉಪಾಧೀಕ್ಷಕರು ತೀರ್ಥಹಳ್ಳಿ ಉಪ ವಿಭಾಗ, ಶ್ರೀ ರಾಜಶೇಖರ್ ಎಲ್ ಮಾನ್ಯ ವೃತ್ತ ನಿರೀಕ್ಷಕರು ಮಾಳೂರು ವೃತ್ತ ರವರ ಮಾರ್ಗದರ್ಶನದಲ್ಲಿ, ಶ್ರೀ ಸುನೀಲ್ ಬಿ.ಸಿ ಪಿ.ಎಸ್.ಐ ಮಾಳೂರು ಪೊಲೀಸ್ ಠಾಣೆ ಮತ್ತು ಎ.ಎಸ್.ಐ ರವರಾದ ಶ್ರೀ ನಾಗರಾಜ್ ಬಿ ಮತ್ತು ಶ್ರೀ ಸುರೇಶ್ ಎನ್ ಹಾಗೂ ಸಿಬ್ಬಂದಿಗಳಾದ ಶ್ರೀ ಸುರಕ್ಷಿತ, ಹೆಚ್.ಸಿ . ಶ್ರೀ ಪುನೀತ್ ಕುಮಾರ್ ಎಸ್ ಎನ್ ಸಿಪಿಸಿ,ಶ್ರೀ ಕೇಶವಮೂರ್ತಿ ಹೆಚ್ ಸಿ . ಶ್ರೀ ಸಂತೋಷ್ ಕುಮಾರ್, ಸಿಪಿಸಿ , ಶ್ರೀ ಚೇತನ್ ಕುಮಾರ್ ಸಿ.ಪಿ.ಸಿ, ಶ್ರೀ ಸುಧಾಕರ್ ಹೆಚ್.ಸಿ , ಶ್ರೀ ಸಾದುದ್ದೀನ್ ಹೆಚ್ ಸಿ . ಶ್ರೀ ಮಂಜು ಸಿಪಿಸಿ , ಶ್ರೀ ವಸಂತ ಸಿಪಿಸಿ , ಶ್ರೀ ಸುರೇಶ್ ನಾಯ್ಕ ಸಿ.ಪಿ.ಸಿ ಆಗುಂಬೆ ಪೊಲೀಸ್ ಠಾಣೆ ರವರನ್ನೊಳಗೊಂಡ ತಂಡ ಈ ಮೇಲ್ಕಂಡ ಪ್ರಕರಣಗಳ ಆರೋಪಿತನಾದ ಕುಮಾರ ಎಸ್.ಕೆ ತಂದೆ ಲೇಟ್ ಸಿದ್ದಪ್ಪ ಜಿ. 31 ವರ್ಷ, ವಿಶ್ವಕರ್ಮ ಜನಾಂಗ, ಕೂಲಿ ಕೆಲಸ, ವಾಸ ರಾಗಿಗುಡ್ಡ, 04 ನೇ ಕ್ರಾಸ್, ಶಿವಮೊಗ್ಗ ಟೌನ್ ಶಿವಮೊಗ್ಗ ಜಿಲ್ಲೆ ಈತನನ್ನು ದಸ್ತಗಿರಿ ಮಾಡಿ, ಸದರಿ ಆರೋಪಿತನಿಂದ ಅಂದಾಜು 93.000 ರೂ ಮೌಲ್ಯದ ಒಟ್ಟು 750 ಮೀಟರ್ ಉದ್ದದ ಮೋಟಾರ್ ಕೇಬಲ್ ವೈರನ್ನು ಹಾಗೂ ಕೃತ್ಯಕ್ಕೆ ಬಳಸಿದ ಅಂದಾಜು 30,000 ರೂ ಮೌಲ್ಯದ ಕೆ.ಎ 31 ಆರ್ 4944 ನೊಂದಣಿ ಸಂಖ್ಯೆಯ ಬಜಾಜ್ ಪಲ್ಸರ್ ಬೈಕನ್ನು ವಶ ಪಡೆದುಕೊಂಡಿರುತ್ತಾರೆ

ಮತದಾರರ ಪಟ್ಟಿ ಪರಿಷ್ಕರಣೆ: ಪ್ರಜಾಪ್ರಭುತ್ವದ ಬಲವರ್ಧನೆಗೆ ಪ್ರತಿಯೊಬ್ಬರ ಸಹಭಾಗಿತ್ವ ಅಗತ್ಯ - ಜೆಡಿಎಸ್ ಕ್ಷೇತ್ರಾಧ್ಯಕ್ಷ ಪುಟ್ಟಸ್ವಾಮಿ
ಯಳಂದೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಅತ್ಯಂತ ಶಕ್ತಿಯುತ ಅಸ್ತ್ರ. ಈ ಅಸ್ತ್ರವನ್ನು ಸರಿಯಾಗಿ ಬಳಸಲು ಪ್ರತಿಯೊಬ್ಬ ಅರ್ಹ ನಾಗರಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವುದು ಹಾಗೂ ದೋಷಗಳಿದ್ದಲ್ಲಿ ಸರಿಪಡಿಸಿಕೊಳ್ಳುವುದು ಅವಶ್ಯಕ ಎಂದು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕ್ಷೇತ್ರಾಧ್ಯಕ್ಷ ಪುಟ್ಟಸ್ವಾಮಿ ಅವರು ಕರೆ ನೀಡಿದರು.
ಯಳಂದೂರು ತಾಲ್ಲೂಕಿನ ವಡಗೆರೆ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ, ಜೆಡಿಎಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 'ಮತದಾರರ ಪಟ್ಟಿ ಪರಿಷ್ಕರಣೆ ಪೂರ್ವಭಾವಿ ಸಭೆ'ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಅರ್ಹ ಮತದಾರರ ನೋಂದಣಿಗೆ ಒತ್ತು:
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜೆಡಿಎಸ್ ಕ್ಷೇತ್ರಾಧ್ಯಕ್ಷ ಪುಟ್ಟಸ್ವಾಮಿ ಅವರು, "ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಅರ್ಹ ಮತದಾರರು ತಮ್ಮ ಹಕ್ಕಿನಿಂದ ವಂಚಿತರಾಗಬಾರದು. 18 ವರ್ಷ ತುಂಬಿದ ಪ್ರತಿಯೊಬ್ಬ ಯುವಕ-ಯುವತಿಯರು ಮತ್ತು ಹೊಸದಾಗಿ ವಲಸೆ ಬಂದಿರುವ ಕುಟುಂಬಗಳು ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಬೇಕು. ಜೆಡಿಎಸ್ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಮನೆ ಮನೆಗೆ ತೆರಳಿ, ಈ ಪ್ರಕ್ರಿಯೆಯಲ್ಲಿ ಜನರಿಗೆ ಅಗತ್ಯ ಮಾರ್ಗದರ್ಶನ ನೀಡಬೇಕು" ಎಂದು ಸೂಚಿಸಿದರು.
ಪಕ್ಷದ ಬಲವರ್ಧನೆಗೆ ಕರೆ:
ಕ್ಷೇತ್ರದ ಅಭಿವೃದ್ಧಿ ಹಾಗೂ ಪಕ್ಷದ ಸಂಘಟನೆ ಕುರಿತು ಮಾತನಾಡಿದ ಅವರು, "ಜೆಡಿಎಸ್ ಪಕ್ಷವು ಯಾವಾಗಲೂ ಬಡವರ, ರೈತರ ಮತ್ತು ಶೋಷಿತರ ಪರವಾಗಿ ಧ್ವನಿ ಎತ್ತುತ್ತಾ ಬಂದಿದೆ. ಪಕ್ಷದ ತತ್ವ ಸಿದ್ಧಾಂತಗಳನ್ನು ತಳಮಟ್ಟದ ಜನರಿಗೆ ತಲುಪಿಸುವ ಕೆಲಸವನ್ನು ಕಾರ್ಯಕರ್ತರು ನಿರಂತರವಾಗಿ ಮಾಡಬೇಕು. ವಡಗೆರೆ ಭಾಗದಲ್ಲಿ ಪಕ್ಷದ ಬಲವರ್ಧನೆಗೆ ಪ್ರತಿಯೊಬ್ಬ ಮುಖಂಡರೂ ಒಗ್ಗಟ್ಟಾಗಿ ಕೆಲಸ ಮಾಡೋಣ" ಎಂದು ಮನವಿ ಮಾಡಿದರು.
ಸಭೆಯ ಪ್ರಮುಖಾಂಶಗಳು:
ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿರುವವರ ಪಟ್ಟಿ ತಯಾರಿ.
ತಿದ್ದುಪಡಿ ಹಾಗೂ ಹೊಸ ಹೆಸರು ಸೇರ್ಪಡೆಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು.
ಬೂತ್ ಮಟ್ಟದ ಏಜೆಂಟರಿಗೆ ಅಗತ್ಯ ತರಬೇತಿ ಹಾಗೂ ಹೊಣೆಗಾರಿಕೆ ಹಂಚಿಕೆ.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಸ್ಥಳೀಯ ಮುಖಂಡರು, ಗ್ರಾಮ ಪಂಚಾಯಿತಿ ಸದಸ್ಯರು, ಯುವ ಘಟಕದ ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ ಉಸ್ಮಾನ್ ಖಾನ್

ಬಳ್ಳಾವರ ಸರ್ಕಾರಿ ಶಾಲೆಗೆ ತರೀಕೆರೆ ರೋಟರಿ ಸಂಸ್ಥೆಯಿಂದ ‘ಗ್ರೀನ್ ಬೋರ್ಡ್’ ಕೊಡುಗೆ*
ರೋಟರಿ ಸಂಸ್ಥೆ ತರೀಕೆರೆ, ಹಿರಿಯ ಪ್ರಾಥಮಿಕ ಶಾಲೆ, ಬಳ್ಳಾವರ ಇವರ ಸಹಯೋಗದೊಂದಿಗೆ ದಿನಾಂಕ 09/06/2026ರ ಮಂಗಳವಾರದಂದು ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಗೆ *ಗ್ರೀನ್ ಬೋರ್ಡ್ ವಿತರಣಾ ಕಾರ್ಯಕ್ರಮ* ವನ್ನು ಹಮ್ಮಿಕೊಳ್ಳಲಾಗಿತ್ತು.
*ಕಾರ್ಯಕ್ರಮದಲ್ಲಿ ತರೀಕೆರೆ ರೋಟರಿ ಸಂಸ್ಥೆಯ ಸದಸ್ಯರುಗಳಾದ ರೊ. ಗಿರೀಶ್ ಸಿ. ಎಂ., ರೊ. ಕಲ್
ಬಳ್ಳಾವರ ಸರ್ಕಾರಿ ಶಾಲೆಗೆ ತರೀಕೆರೆ ರೋಟರಿ ಸಂಸ್ಥೆಯಿಂದ ‘ಗ್ರೀನ್ ಬೋರ್ಡ್’ ಕೊಡುಗೆ*
ರೋಟರಿ ಸಂಸ್ಥೆ ತರೀಕೆರೆ, ಹಿರಿಯ ಪ್ರಾಥಮಿಕ ಶಾಲೆ, ಬಳ್ಳಾವರ ಇವರ ಸಹಯೋಗದೊಂದಿಗೆ ದಿನಾಂಕ 09/06/2026ರ ಮಂಗಳವಾರದಂದು ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಗೆ *ಗ್ರೀನ್ ಬೋರ್ಡ್ ವಿತರಣಾ ಕಾರ್ಯಕ್ರಮ* ವನ್ನು ಹಮ್ಮಿಕೊಳ್ಳಲಾಗಿತ್ತು.
*ಕಾರ್ಯಕ್ರಮದಲ್ಲಿ ತರೀಕೆರೆ ರೋಟರಿ ಸಂಸ್ಥೆಯ ಸದಸ್ಯರುಗಳಾದ ರೊ. ಗಿರೀಶ್ ಸಿ. ಎಂ., ರೊ. ಕಲ್ಲೇಶ್ ಡಿ. ಕೆ. ಹಾಗೂ ರೊ. ಸುರೇಶ್ ಡಿ. ಸಿ. ಅವರು ಶಾಲೆಯ ಮಕ್ಕಳ ಶೈಕ್ಷಣಿಕ ಬಳಕೆಗೆ ಅತ್ಯಗತ್ಯವಾಗಿರುವ ಮೂರು ಗ್ರೀನ್ ಬೋರ್ಡ್‌ಗಳನ್ನು ಕೊಡುಗೆಯಾಗಿ ನೀಡಿದರು*.
*ಶಿಕ್ಷಣಕ್ಕೆ ಪೂರಕ ವಾತಾವರಣ ಮುಖ್ಯ*: *ರೊ. ರವಿಕುಮಾರ್ ಬಿ. ಪಿ*.
ಗ್ರೀನ್ ಬೋರ್ಡ್ ವಿತರಿಸಿ ಮಾತನಾಡಿದ ತರೀಕೆರೆ ರೋಟರಿ ಕ್ಲಬ್ ನ ಅಧ್ಯಕ್ಷರಾದ ರೊ. ರವಿಕುಮಾರ್ ಬಿ.ಪಿ. ಅವರು,
"ಶಿಕ್ಷಣವು ಪ್ರತಿಯೊಬ್ಬ ಮಗುವಿನ ಭವಿಷ್ಯವನ್ನು ರೂಪಿಸುವ ಅತ್ಯಂತ ಶಕ್ತಿಯುತ ಸಾಧನವಾಗಿದೆ. ಮಕ್ಕಳಿಗೆ ಉತ್ತಮ ಕಲಿಕಾ ವಾತಾವರಣವನ್ನು ನಿರ್ಮಿಸುವಲ್ಲಿ ಶಾಲೆಯ ಮೂಲಸೌಕರ್ಯಗಳು ಬಹಳ ಮುಖ್ಯ ಪಾತ್ರವಹಿಸುತ್ತವೆ. ಆ ನಿಟ್ಟಿನಲ್ಲಿ ನಮ್ಮ ತರೀಕೆರೆ ರೋಟರಿ ಸಂಸ್ಥೆಯ ವತಿಯಿಂದ ಈ ಮೂರು ಗ್ರೀನ್ ಬೋರ್ಡ್‌ಗಳನ್ನು ನಿಮ್ಮ ಶಾಲೆಗೆ ಕೊಡುಗೆಯಾಗಿ ನೀಡುತ್ತಿರುವುದು ನಮಗೆ ಅತ್ಯಂತ ಸಂತೋಷ ಮತ್ತು ಹೆಮ್ಮೆಯ ವಿಷಯವಾಗಿದೆ," ಎಂದು ಆಶಯ ವ್ಯಕ್ತಪಡಿಸಿದರು.
*ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು*:
ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಪ್ರಮುಖ ಪದಾಧಿಕಾರಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ರೊ. ಪ್ರವೀಣ್ ಪಿ. – ಕಾರ್ಯದರ್ಶಿಗಳು, ರೋಟರಿ ಸಂಸ್ಥೆ ತರೀಕೆರೆ.
ರೊ. ಪ್ರವೀಣ್ ನಹರ್ ಟಿ. ಎಂ. – ಸಹಾಯಕ ಗವರ್ನರ್, ವಲಯ-7.
ರೊ. ಮಂಜುನಾಥ್ ಬಿ. ಕೆ. – ರೋಟರಿ ಸದಸ್ಯರು.
ರೊ. ಗಿರೀಶ್ ಸಿ. ಎಂ. – ರೋಟರಿ ಸದಸ್ಯರು.
*ವಿದ್ಯಾರ್ಥಿಗಳ ಸಮ್ಮುಖದಲ್ಲಿ ಯಶಸ್ವಿ ಕಾರ್ಯಕ್ರಮ*:
ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಶಂಕರಮ್ಮ ಹಾಗೂ ಸಹ ಶಿಕ್ಷಕರಾದ ಶ್ರೀ ಸಂತೋಷ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು 75ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಸಹ ಶಿಕ್ಷಕರಾದ ಶ್ರೀಮತಿ ಆಶಾ ಅವರು ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಶ್ರೀಮತಿ ಶ್ವೇತಾ ಅವರು ನೆರೆದಿದ್ದ ಗಣ್ಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ವಂದನಾರ್ಪಣೆ ನೆರವೇರಿಸಿದರು.
ಧನ್ಯವಾದಗಳು

ದೊಡ್ಡಬೆಮ್ಮತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮದ ಅಕ್ಷರಾಭ್ಯಾಸ: ಜ್ಞಾನದ ದೀವಿಗೆಯತ್ತ ಪುಟ್ಟ ಕಂದಮ್ಮಗಳ ಪದಾರ್ಪಣೆ**
**ಅರಕಲಗೂಡು:** ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿ ಬರುವ ದೊಡ್ಡಬೆಮ್ಮತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು, ವಿದ್ಯಾರ್ಥಿಗಳ ಪಾಲಿಗೆ ಜ್ಞಾನದ ದೇಗುಲವಾಗಿ ಕಾರ್ಯನಿರ್ವಹಿಸುತ್ತಿದೆ. ಇದೇ ಶಾಲೆಯಲ್ಲಿ ಇತ್ತೀಚೆಗೆ ಎಲ್‌ಕೆಜಿ ಮತ್ತು ಯುಕೆಜಿ ತರಗತಿಯ ಪುಟ
ದೊಡ್ಡಬೆಮ್ಮತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮದ ಅಕ್ಷರಾಭ್ಯಾಸ: ಜ್ಞಾನದ ದೀವಿಗೆಯತ್ತ ಪುಟ್ಟ ಕಂದಮ್ಮಗಳ ಪದಾರ್ಪಣೆ**
**ಅರಕಲಗೂಡು:** ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿ ಬರುವ ದೊಡ್ಡಬೆಮ್ಮತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು, ವಿದ್ಯಾರ್ಥಿಗಳ ಪಾಲಿಗೆ ಜ್ಞಾನದ ದೇಗುಲವಾಗಿ ಕಾರ್ಯನಿರ್ವಹಿಸುತ್ತಿದೆ. ಇದೇ ಶಾಲೆಯಲ್ಲಿ ಇತ್ತೀಚೆಗೆ ಎಲ್‌ಕೆಜಿ ಮತ್ತು ಯುಕೆಜಿ ತರಗತಿಯ ಪುಟಾಣಿಗಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ಅತ್ಯಂತ ವೈಭವದಿಂದ ಆಚರಿಸಲಾಯಿತು.
ಈ ಶಾಲೆಯು ಅರಕಲಗೂಡು ಕ್ಷೇತ್ರದ ಶಾಸಕರ ದೂರದೃಷ್ಟಿಯ ಫಲವಾಗಿ ಸುದೀರ್ಘ ಕಾಲದ ಹಿಂದೆ ಆರಂಭವಾದ 'ಮಕ್ಕಳ ಮನೆ' ಯೋಜನೆಯ ಭಾಗವಾಗಿದೆ. ಗ್ರಾಮೀಣ ಭಾಗದ ಬಡ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಶಾಸಕರ ಆಶಯ ಮತ್ತು ಅವರ ವಿಶೇಷ ಮುತುವರ್ಜಿಯಿಂದ ಈ ಶಾಲೆ ಇಂದಿಗೂ ನೂರಾರು ಮಕ್ಕಳ ಪಾಲಿಗೆ ಭರವಸೆಯ ಬೆಳಕಾಗಿ ನಿಂತಿದೆ. ಅಕ್ಷರಾಭ್ಯಾಸದ ಈ ಕಾರ್ಯಕ್ರಮವು ಶಾಸಕರ ಆಶಯದಂತೆ ಶಾಲೆಯು ನಡೆಸಿಕೊಂಡು ಬರುತ್ತಿರುವ ಶಿಕ್ಷಣ ಪರ ಕಾರ್ಯಚಟುವಟಿಕೆಗಳ ಪ್ರತಿಬಿಂಬವಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಕುಮಾರಸ್ವಾಮಿ ಅವರು ವಹಿಸಿದ್ದರು. ಅಕ್ಷರಾಭ್ಯಾಸ ಎಂಬುದು ಮಗುವಿನ ಜೀವನದ ಶೈಕ್ಷಣಿಕ ಪಯಣದ ಮೊದಲ ಮೈಲಿಗಲ್ಲು ಎಂಬುದನ್ನು ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪ್ರತಿಪಾದಿಸಿದರು.
ಈ ಕಾರ್ಯಕ್ರಮದ ಅತ್ಯಂತ ವಿಶೇಷ ಹಾಗೂ ಭಾವುಕ ಕ್ಷಣವೆಂದರೆ ಪೋಷಕರ ಪಾಲ್ಗೊಳ್ಳುವಿಕೆ. ತಾಯಂದಿರು ತಮ್ಮ ಮುದ್ದು ಮಕ್ಕಳನ್ನು ಮಡಿಲಲ್ಲಿ ಕೂರಿಸಿಕೊಂಡು, ಅವರ ಕೈಹಿಡಿದು ತಟ್ಟೆಯಲ್ಲಿ ಅಕ್ಕಿಯ ಮೇಲೆ ಅಕ್ಷರಗಳನ್ನು ಬರೆಯುವಂತೆ ಪ್ರೇರೇಪಿಸುತ್ತಿದ್ದ ದೃಶ್ಯವು ನೆರೆದಿದ್ದವರ ಕಣ್ಣಲ್ಲಿ ಆನಂದಬಾಷ್ಪವನ್ನು ತರಿಸಿತು. ತಂದೆಯಂದಿರೂ ಸಹ ಅಷ್ಟೇ ಉತ್ಸಾಹದಿಂದ ಭಾಗವಹಿಸಿ, ತಮ್ಮ ಮಕ್ಕಳ ಭವಿಷ್ಯದ ಮೊದಲ ಹೆಜ್ಜೆಗೆ ಬೆಂಬಲವಾಗಿ ನಿಂತರು. ಪೋಷಕರು ಮತ್ತು ಮಕ್ಕಳ ನಡುವಿನ ಈ ಆತ್ಮೀಯ ಬಾಂಧವ್ಯವು ಅಕ್ಷರ ಕಲಿಕೆಯ ಈ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತ್ತು.
ಶಾಲೆಯ ಮುಖ್ಯ ಶಿಕ್ಷಕರಾದ ರಂಗಸ್ವಾಮಿ ಡಿ.ಜಿ. ಅವರು ಮಾತನಾಡಿ, "ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪೋಷಕರು ಮತ್ತು ಶಿಕ್ಷಕರ ನಡುವಿನ ಸಮನ್ವಯ ಬಹಳ ಮುಖ್ಯ. ಶಾಸಕರ ಆಶಯದಂತೆ ನಮ್ಮ ಶಾಲೆಯು ಕೇವಲ ಅಕ್ಷರ ಜ್ಞಾನವಷ್ಟೇ ಅಲ್ಲದೆ, ಉತ್ತಮ ನೈತಿಕ ಮೌಲ್ಯಗಳನ್ನು ಹಾಗೂ ಸಂಸ್ಕಾರವನ್ನೂ ಕಲಿಸುವ ಕೇಂದ್ರವಾಗಿ ರೂಪುಗೊಂಡಿದೆ. ಈ ಶಾಲೆಯ ಬೆಳವಣಿಗೆಗೆ ಶಾಸಕರು ನೀಡುತ್ತಿರುವ ನಿರಂತರ ಬೆಂಬಲ ನಮಗೆ ಸ್ಪೂರ್ತಿಯಾಗಿದೆ" ಎಂದು ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್.ಸಿ ಉಪಾಧ್ಯಕ್ಷರಾದ ಸವಿತಾ ಅವರು ಉಪಸ್ಥಿತರಿದ್ದು, ಮಕ್ಕಳ ಕಲಿಕೆಗೆ ಪೋಷಕರ ಪ್ರೋತ್ಸಾಹದ ಅಗತ್ಯವನ್ನು ಒತ್ತಿ ಹೇಳಿದರು. ಅಲ್ಲದೆ, ಎಸ್.ಡಿ.ಎಮ್.ಸಿ ಸದಸ್ಯರಾದ ಶಂಕರ್ ಮುದಗನೂರು, ಮೆಡಿಕಲ್ ಸ್ವಾಮಿ, ಚಂದ್ರ, ದಿವ್ಯ ಮತ್ತು ರಾಜು ಸಿ.ವಿ. ಅವರು ಸಮಾರಂಭದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಶಾಲೆಯ ಸಹ ಶಿಕ್ಷಕರಾದ ಮಹೇಶ ಡಿ.ಎಸ್., ಮುನಾಫ್, ಕುಮಾರಸ್ವಾಮಿ, ಪೃಥ್ವಿ, ಇಂಪನ ಮತ್ತು ರೇಣುಕ ಅವರು ಮಕ್ಕಳಿಗೆ ಅಕ್ಷರ ಬರೆಯುವ ಸರಳ ವಿಧಾನಗಳನ್ನು ತಿಳಿಸಿಕೊಟ್ಟು, ಆಟ-ಪಾಠಗಳ ಮೂಲಕ ಮಕ್ಕಳಲ್ಲಿ ಕಲಿಕಾಸಕ್ತಿಯನ್ನು ಮೂಡಿಸಿದರು. ಇಡೀ ದಿನ ಶಾಲೆಯ ಆವರಣವು ಮಕ್ಕಳ ನಗು ಮತ್ತು ಪೋಷಕರ ಸಂತೋಷದಿಂದ ಕಂಗೊಳಿಸುತ್ತಿತ್ತು. ಸಮಾರಂಭದ ಕೊನೆಯಲ್ಲಿ ಸಿಹಿತಿಂಡಿ ಹಂಚುವ ಮೂಲಕ ಸಂಭ್ರಮವನ್ನು ಇಮ್ಮಡಿಗೊಳಿಸಲಾಯಿತು.

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ವತಿಯಿಂದ ಜಿಲ್ಲಾಮಟ್ಟದ ಸಭೆ
ಈ ಸಭೆಯ ಕುರಿತು ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕುಗಳಾದ ಅಜ್ಜಂಪುರ, ತರೀಕೆರೆ, ಕಡೂರು
, ಚಿಕ್ಕಮಗಳೂರು ತಾಲ್ಲೂಕುಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸಭೆ ಇಂದು ತರೀಕೆರೆಯ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧ್ಯಕ್ಷರಾದ ಹೆಚ್ ಗುರುಮೂರ್ತಿ ಅವರ ಅದ್ಯಕ್ಷತೆಯಲ್ಲಿ ನಡೆಯಿತು.
ಜಿಲ್ಲೆಯ ಈ ನಾಲ್ಕು ತಾಲ್ಲೂಕಿನ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚಿಸಲ
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ವತಿಯಿಂದ ಜಿಲ್ಲಾಮಟ್ಟದ ಸಭೆ
ಈ ಸಭೆಯ ಕುರಿತು ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕುಗಳಾದ ಅಜ್ಜಂಪುರ, ತರೀಕೆರೆ, ಕಡೂರು
, ಚಿಕ್ಕಮಗಳೂರು ತಾಲ್ಲೂಕುಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸಭೆ ಇಂದು ತರೀಕೆರೆಯ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧ್ಯಕ್ಷರಾದ ಹೆಚ್ ಗುರುಮೂರ್ತಿ ಅವರ ಅದ್ಯಕ್ಷತೆಯಲ್ಲಿ ನಡೆಯಿತು.
ಜಿಲ್ಲೆಯ ಈ ನಾಲ್ಕು ತಾಲ್ಲೂಕಿನ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ಹಾಗೂ ಸರ್ಕಾರಿ
ಕಛೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಮತ್ತು ಜನಸಾಮಾನ್ಯರ ಮೇಲೆ ಅಧಿಕಾರಿಗಳ
ದೌರ್ಜನ್ಯದ ಬಗ್ಗೆ ಪಡಿತರ ವಿತರಣೆ ಬಗ್ಗೆ ಕಳಪೆ ಕಾಮಗರಿಗಳ ಬಗ್ಗೆ ಮತ್ತು ಇನ್ನಿತರ ವಿಷಯಗಳ
ಬಗ್ಗೆ ಹಾಗೂ ಸಂಘಟನೆಯ ಬೆಳವಣಿಗೆ ಹಾಗೂ ಕಾರ್ಯಾವೈಖರಿಯ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಹೆಚ್ ಗುರುಮೂರ್ತಿ ಅವರು ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾದ
ದರ್ಶನ್ ಎಂ ಅವರು ಚಿಕ್ಕಮಗಳೂರು ಜಿಲ್ಲಾ ತಾಲ್ಲೂಕು ಅಧ್ಯಕರಾದ ಅನಿಲ್ ಕೆ ಪಿ ಅವರು ಕುಮಾರ
ಅವರು
ಅಜ್ಜಂಪುರ ತಾಲ್ಲೂಕು ಅಧ್ಯಕ್ಷರಾದ ದೇವರಾಜ್ ಅವರು ತರೀಕೆರೆ ಅಧ್ಯಕ್ಷರಾದ ನಿಶ್ಚಲ್ ಅವರು ಉಪಾಧ್ಯಕ್ಷರಾದ ರಾಕೇಶ್ ಪ್ರಧಾನ ಕಾರ್ಯದರ್ಶಿಗಳಾದ ಶರತ್ ಅವರು ಕಾರ್ಯದರ್ಶಿಗಳಾದ ಅಕಿಲ್
ಅವರು ಮತ್ತು ಕಡೂರು ತಾಲ್ಲೂಕು ಅಧ್ಯಕ್ಷರಾದ ವಾಸು ಕೆ ಅವರು ಉಪಸ್ಥಿತರಿದ್ದರು.

ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದಲ್ಲಿ 3ನೇ ರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿ
ರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ 14 ಬಂಗಾರದ ಪದಕಗಳು 24 ಬಳ್ಳಿ
ಪದಕಗಳು ಹಾಗೂ 37 ಕಂಚಿನ ಪದಕಗಳು ಬೆಳೆಸಿದ್ದ ನ್ಯಾಷನಲ್ ಪಬ್ಲಿಕ್ ಸ್ಕೂಲ್, ಶಿವಮೊಗ್ಗ
ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ 3ನೇ ರಾಷ್ಟ್ರೀಯ ಮಟ್ಟದ ಕರಾಟೆ
ಪಂದ್ಯಾವಳಿ ಯಶಸ್ವಿಯಾಗಿ ನಡೆಯಿತು. ಈ ಪಂದ್ಯಾವಳಿಯಲ್ಲಿ ಶಿವಮೊಗ್ಗ ಜಿಲ್ಲೆಯ
ನ್ಯಾಷನಲ್ ಪಬ್ಲಿಕ್
ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದಲ್ಲಿ 3ನೇ ರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿ
ರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ 14 ಬಂಗಾರದ ಪದಕಗಳು 24 ಬಳ್ಳಿ
ಪದಕಗಳು ಹಾಗೂ 37 ಕಂಚಿನ ಪದಕಗಳು ಬೆಳೆಸಿದ್ದ ನ್ಯಾಷನಲ್ ಪಬ್ಲಿಕ್ ಸ್ಕೂಲ್, ಶಿವಮೊಗ್ಗ
ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ 3ನೇ ರಾಷ್ಟ್ರೀಯ ಮಟ್ಟದ ಕರಾಟೆ
ಪಂದ್ಯಾವಳಿ ಯಶಸ್ವಿಯಾಗಿ ನಡೆಯಿತು. ಈ ಪಂದ್ಯಾವಳಿಯಲ್ಲಿ ಶಿವಮೊಗ್ಗ ಜಿಲ್ಲೆಯ
ನ್ಯಾಷನಲ್ ಪಬ್ಲಿಕ್ ಸ್ಕೂಲ್ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಗಮನಾರ್ಹ ಸಾಧನೆ ಮೆರೆದಿದ್ದಾರೆ.
ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿ ಒಟ್ಟು 14 ಬಂಗಾರದ ಪದಕಗಳು, 24 ಬೆಳ್ಳಿ ಪದಕಗಳು ಹಾಗೂ 37 ಕಂಚಿನ ಪದಕಗಳನ್ನು ಗಳಿಸಿದ್ದು, ಜೊತೆಗೆ ಸಮಗ್ರ ಪ್ರಶಸ್ತಿಯನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ.
ಈ ಅತ್ಯುತ್ತಮ ಸಾಧನೆಗಾಗಿ ಶಾಲೆಯ ಪ್ರಾಂಶುಪಾಲರಾದ ನವೀನಾ ಎಂ. ಪೈಸ್, ಶಾಲಾ ಮ್ಯಾನೇಜ್ಮೆಂಟ್, ಶಿಕ್ಷಕ ವೃಂದ ಹಾಗೂ ಪೋಷಕರು ವಿದ್ಯಾರ್ಥಿಗಳಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಕರಾಟೆ ತರಬೇತುದಾರರಾದ ಸೆನ್ಸೈ ಮಂಜುನಾಥ್ ಹಾಗೂ ಸಹ ತರಬೇತಿದಾರರು ವಿದ್ಯಾರ್ಥಿಗಳ ಶಿಸ್ತು, ಪರಿಶ್ರಮ ಮತ್ತು ಸಾಧನೆಯನ್ನು ಶ್ಲಾಘಿಸಿ ಅಭಿನಂದನೆಗಳನ್ನು ಸಲ್ಲಿಸಿದರು.

ಸೊರಬ: ಹಿಂದೂಗಳ ಪವಿತ್ರ ಕ್ಷೇತ್ರ ಧರ್ಮಸ್ಥಳದ ಘನತೆಗೆ ಧಕ್ಕೆ ಮತ್ತು ಕಳಂಕ ತರುತ್ತಿರುವವರನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಿಜೆಪಿ ಸೊರಬ ಮಂಡಲ ವತಿಯಿಂದ ಹಿಂದೂಪರ ಸಂಘಟನೆಗಳು ಹಾಗೂ ಭಕ್ತಾದಿಗಳ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲೆ ಸೊರಬ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಸೊರಬ ಪಟ್ಟಣದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದಿಂದ ಮೆರವಣಿಗೆಯಲ್ಲಿ ತೆರಳಿ ಖಾಸಗ
ಸೊರಬ: ಹಿಂದೂಗಳ ಪವಿತ್ರ ಕ್ಷೇತ್ರ ಧರ್ಮಸ್ಥಳದ ಘನತೆಗೆ ಧಕ್ಕೆ ಮತ್ತು ಕಳಂಕ ತರುತ್ತಿರುವವರನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಿಜೆಪಿ ಸೊರಬ ಮಂಡಲ ವತಿಯಿಂದ ಹಿಂದೂಪರ ಸಂಘಟನೆಗಳು ಹಾಗೂ ಭಕ್ತಾದಿಗಳ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲೆ ಸೊರಬ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಸೊರಬ ಪಟ್ಟಣದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದಿಂದ ಮೆರವಣಿಗೆಯಲ್ಲಿ ತೆರಳಿ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಬಹಿರಂಗ ಸಭೆ ನಡೆಸಲಾಯಿತು. ಸಭೆಯನ್ನುದ್ದೇಶಿಸಿ ಬಿಜೆಪಿ ಮುಖಂಡ ಹಾಗೂ ಸಂಚಾಲಕ ಡಾಕ್ಟರ್ ಜ್ಞಾನೇಶ್ ಹೆಚ್.ಈ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಪಟ್ಟಬದ್ಧ ಹಿತಾಸಕ್ತಿಗಳು ಹಾಗೂ ಹಿಂದೂ ವಿರೋಧಿ ಶಕ್ತಿಗಳು ಸಂಘಟಿತವಾಗಿ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದು, ಧರ್ಮಸ್ಥಳದ ಗೌರವ ಹಾಗೂ ಘನತೆಗೆ ಧಕ್ಕೆ ತರುವಂತ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಇದು ಕೋಟ್ಯಂತರ ಕನ್ನಡಿಗರ ಭಾವನೆಗಳಿಗೆ ನೋವುಂಟು ಮಾಡುವುದರೊಂದಿಗೆ ಸಮಾಜದ ಶಾಂತಿ-ಸೌಹಾರ್ದತೆಗೂ ಧಕ್ಕೆ ತರುತ್ತಿದೆ. ಹಿಂದೂ ಪರಂಪರೆಯ ನಾವೆಲ್ಲರೂ ಸ್ವಾಭಿಮಾನಿಗಳಾಗಿದ್ದೇವೆ. ಅಂದು ಸೋಮನಾಥ, ವಿಶ್ವನಾಥ ಇಂದು ಮಂಜುನಾಥನ ಅಸ್ವಿತ್ವವನ್ನೇ ಪ್ರಶ್ನಿಸಲು ಮುಂದಾಗಿದ್ದಾರೆ. ಘಜ್ನಿ ಸಂತತಿಯವರು ಅಂದೂ, ಇಂತಹ ಸಂತತಿಗೆ ನಾವೆಲ್ಲರೂ ವಿಚಲಿತರಾಗಬೇಕಿಲ್ಲ ಎಂದರು.
ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ರಾಜು ಎಂ ತಲ್ಲೂರು ಮಾತನಾಡಿ, ಇಂದು ನಾವು ಧರ್ಮದ ಉಳಿವಿಗಾಗಿ ಹೋರಾಟ ನಡೆಸುವ ಹೋರಾಟ ಹಿಂದೂ ವಿರೋಧಿಗಳಿಗೆ ಇದು ಎಚ್ಚರಿಕೆಯ ಘಂಟೆ. ಧರ್ಮಸ್ಥಳ ನಮಗೆ ಕಲಿಸಿದ್ದು ಧರ್ಮ, ಆಸ್ತಿಕತೆ. ಪ್ರತಿ ಭಕ್ತ ಹಸಿವನ್ನು ತೀರಿಸುವ ಕ್ಷೇತ್ರ ಧರ್ಮಸ್ಥಳ. ಇಂತಹ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ಅತಿದೊಡ್ಡ ಷಡ್ಯಂತ್ರವಾಗಿದೆ. ಹಿಂದೂಗಳ ವಿರುದ್ಧ ಇದೇ ರೀತಿ ಮುಂದುವರೆದರೆ ದೇಶಾದ್ಯಂತ ಹೋರಾಟ ನಡೆಸಬೇಕಾಗುತ್ತದೆ. ರಾಜ್ಯ ಸರ್ಕಾರವು ಈ ಷಡ್ಯಂತ್ರಕ್ಕೆ ಒಳಗಾಗದೇ ನಮ್ಮ ಹಿಂದುತ್ವವನ್ನು ಉಳಿಸಲು ಮುಂದಾಗಬೇಕು ಎಂದು ಎಚ್ಚರಿಸಿದರು.
ವಿಧಾನ ಪರಿಷತ್ ಸದಸ್ಯ ಧನಂಜಯ ಸರ್ಜಿ ಮಾತನಾಡಿ ಈ ಷಡ್ಯಂತ್ರದ ಪಿತೂರಿ ಮಾಡಿರುವ ಸಮಾಜ ಘಾತುಕರ ವಿರುದ್ಧ ಹಾಗೂ ರಾಷ್ಟçವಿರೋಧಿ ಚಟುವಟಿಕೆ ನಡೆಸುತ್ತಿರುವವರ ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರಿಕೃಷ್ಣ, ಮಂಡಲ ಅಧ್ಯಕ್ಷ ಪ್ರಕಾಶ್ ಅಗಸನಹಳ್ಳಿ ಮಾತನಾಡಿದರು.
ಪ್ರಮುಖರಾದ ದೇವೇಂದ್ರಪ್ಪ ಚನ್ನಾಪುರ, ಪ್ರಕಾಶ್ ತಲಕಾಲಕೊಪ್ಪ, ಪಾಣಿರಾಜಪ್ಪ, ವಿಜೇಂದ್ರ ತಲಗುಂದ, ಸುರೇಶ್ ಉದ್ರಿ, ಡಿ. ಶಿವಯೋಗಿ, ಉಮೇಶ್ ಉಡುಗಣಿ, ಗೀತಾ ಮಲ್ಲಿಕಾರ್ಜುನ, ಜಾನಕಪ್ಪ ಒಡೆಯರ್, ಹೊಳಿಯಮ್ಮ ಸೇರಿದಂತೆ ಮುಖಂಡರು, ಕಾರ್ಯಕರ್ತರು, ಭಕ್ತಾದಿಗಳು, ಹಿಂದೂಪರ ಸಂಘಟನೆಯವರು ಪಾಲ್ಗೊಂಡಿದ್ದರು.

Established in 2005, arakshakavaninews has been the go-to source for the latest news and trends in the newspaper and magazine industry. Our journey began with a small team of journalists who shared a passion for storytelling and a desire to inform and engage readers. Over the years, we have grown and expanded our team, but our commitment to delivering high-quality content has never wavered.

At arakshakavaninews, we value integrity, accuracy, and creativity. We are committed to providing our readers with truthful and unbiased information, and we strive to be a trusted source of news and information for our community. We believe that great content is a result of hard work, dedication, and a willingness to take risks and try new things.

Our team is made up of talented journalists, editors, and designers who are passionate about their work. We are dedicated to delivering the best possible content to our readers, and we take pride in the quality of our work. We believe that our team is our greatest asset, and we are committed to investing in their professional development and growth.

At arakshakavaninews, we believe in the transformative power of news. Our philosophy revolves around transparency, integrity, and the pursuit of truth.

We celebrate diversity at arakshakavaninews. Our newsroom is a melting pot of ideas and perspectives, ensuring a well-rounded representation of news.

As a responsible news organization, arakshakavaninews is committed to sustainability. We are continuously looking for ways to minimize our environmental impact.
ತರೀಕೆರೆ : ಪುರಸಭಾ ಸದಸ್ಯ ಲೋಕಾಯುಕ್ತ ಬಲೆಗೆ.
What's something exciting your business offers? Say it here.
Give customers a reason to do business with you.
Say something interesting about your business here.
What's something exciting your business offers? Say it here.
Say something interesting about your business here.
What's something exciting your business offers? Say it here.
Have a story idea for us? Would you like to write for us?
Send us a message and let us know what you are thinking about.
Bhovi Colony, 3rd cross, Kodi camp, Tarikere taluk, Chikkamagaluru Dist., Bhovi colony/Lingadahalli main road, Tarikere, KA 577228
Mon | 12:00 am – 12:00 am | |
Tue | 12:00 am – 12:00 am | |
Wed | 12:00 am – 12:00 am | |
Thu | 12:00 am – 12:00 am | |
Fri | 12:00 am – 12:00 am | |
Sat | 12:00 am – 12:00 am | |
Sun | 12:00 am – 12:00 am |
Sign up to get each issue delivered straight to your inbox.
We use cookies to analyze website traffic and optimize your website experience. By accepting our use of cookies, your data will be aggregated with all other user data.