ರಾಜಕೀಯ, ವಾಣಿಜ್ಯ , ಮನೋರಂಜನೆ, ಕ್ರೈಂ, ಕ್ರೀಡೆ, ಚಲನಚಿತ್ರ, ಸಾಂಸ್ಕೃತಿಕ, ಆರಕ್ಷಕರ, ಮತ್ತು ಇತ್ಯಾದಿಗಳ ಕುರಿತು ಇತ್ತೀಚಿನ ಸುದ್ದಿ ಪಡೆಯಿರಿ.

Mobile:9880958680/7899558680
ರಾಜಕೀಯ, ವಾಣಿಜ್ಯ , ಮನೋರಂಜನೆ, ಕ್ರೈಂ, ಕ್ರೀಡೆ, ಚಲನಚಿತ್ರ, ಸಾಂಸ್ಕೃತಿಕ, ಆರಕ್ಷಕರ, ಮತ್ತು ಇತ್ಯಾದಿಗಳ ಕುರಿತು ಇತ್ತೀಚಿನ ಸುದ್ದಿ ಪಡೆಯಿರಿ.
Mobile:9880958680/7899558680
ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲೂಕು ಕಚೇರಿಯ ಉಪತಹಶೀಲ್ದಾರ್ ಆದ,ಬನ್ನೂರು ಚಂದ್ರೇಗೌಡ ಕಲ್ಮುರುಡಪ್ಪ ತನ್ನ ಕೆಲಸದ ಜವಾಬ್ದಾರಿಯನ್ನು ಮರೆತು ಕೆಲಸದ ಸಮಯದಲ್ಲಿ ಕಚೇರಿಯ ಹಿಂಬದಿಯಲ್ಲಿರುವ ಜಾಗದಲ್ಲಿ ಕೆಲಸ ನಿರ್ವಹಿಸುವ ವೇಳೆಯಲ್ಲಿ ಧೂಮಪಾನ(smoking) ಮಾಡಿಕೊಂಡು ಕೆಲಸದ ಸಮಯವನ್ನು ಟೈಂಪಾಸ್ ಮಾಡುತ್ತಾರೆ.
ನಿತ್ಯ ಸರ್ಕಾರಿ ಅಧಿಕಾರಿಗಳು ಸರ್ಕಾರದ ಕೆಲಸಕ್ಕೆ ಬರುವ ಸಮಯದಲ್ಲಿ ನಿಗದಿಪಡಿಸಿದ ಸಮಯವನ್ನು ಬಿಟ್ಟು ಮನಸ್ಸಿಗೆ ಬಂದಂತೆ ಕಚೇರಿಗೆ ಬರುತ್ತಾರೆ.
ದಿನನಿತ್ಯ ಅಧಿಕಾರಿಗಳು ಊಟಕ್ಕೆ ಹೋಗಿ ಬರುವ ವೇಳೆಯನ್ನು ಸರ್ಕಾರ ನಿಗದಿ ಪಡಿಸಿದೆ, ಕಡೂರು ತಾಲೂಕು ಕಚೇರಿಯ ಉಪತಹಶೀಲ್ದಾರ್ ಆದ ಕಲ್ಮುರುಡಪ್ಪ ಗೆ ಸರ್ಕಾರದ ಯಾವುದೇ ಸಮಯ ಅನ್ವಯಿಸುವುದಿಲ್ಲ.
ಊಟಕ್ಕೆ ಹೋಗಿ ಉಪತಹಶೀಲ್ದಾರ್ ಹಾಗೂ ಚುನಾವಣೆ ಶಿರಸ್ತೇದಾರ್ ಎನ್. ನಾಗರಾಜ್ ಬರುವುದು ಕಚೇರಿಯ ಸಮಯ ಮುಗಿಯುವ ವೇಳೆಗೆ ಸುಮಾರು ನಾಲ್ಕು ಗಂಟೆ ಈ ಮಧ್ಯದ ಸಮಯದಲ್ಲಿ ಕಡೂರಿನ ಗ್ರೀನ್ ಪಾರ್ಕ (green park restorent)ರೆಸ್ಟೋರೆಂಟ್ ನಲ್ಲಿ ಎಣ್ಣೆ ಹೊಡೆದುಕೊಂಡು ಟೈಂಪಾಸ್ ಮಾಡಿಕೊಂಡು ತೂರಾಡ್ಕೊಂಡು ಕಚೇರಿಗೆ ಬರುತ್ತಾರೆ.
ದಿನನಿತ್ಯ ಇದೇ ರೀತಿ ದಿನಚರಿಯಾಗಿ ಮದ್ಯಪಾನ(drinking)ಮಾಡಿ ಕಚೇರಿಗೆ ಬರುತ್ತಾರೆ. ಇವರ ಕೆಲಸದ ಕಾರ್ಯಾಚರಣೆ ಬಗ್ಗೆ ಮೇಲಾಧಿಕಾರಿಯದ ತಹಶೀಲ್ದಾರ್ ಗಮನಕ್ಕೆ ಹಾಗೂ ಜಿಲ್ಲಾಧಿಕಾರಿಯವರ ಗಮನಕ್ಕೆ ಯಾಕೆ ಬಂದಿಲ್ಲ?, ಅಥವಾ ಬಂದರು ಸುಮ್ಮನಿದ್ದಾರೆಯೇ? ಕಾರಣವೇನು.?
ಸರ್ಕಾರದ ಕೆಲಸದ ಸಮಯವನ್ನು ಬೇಜವಾಬ್ದಾರಿಯಿಂದ ಮದ್ಯಪಾನ ಮಾಡಿ ಕಚೇರಿಗೆ ಬರುವುದು ತಾಲೂಕು ಕಚೇರಿಯಲ್ಲಿರುವ ಅಧಿಕಾರಿಗಳಿಗೆ ಗೊತ್ತಿಲ್ಲವೇ, ಸಾರ್ವಜನಿಕರು ಉಪತಹಶೀಲ್ದಾರ್ ಕಲ್ಮುರುಡಪ್ಪ ರವರ ಬೇಜವಾಬ್ದಾರಿತನದ ಬಗ್ಗೆ ಆರಕ್ಷಕ ವಾಣಿ ಪತ್ರಿಕೆ ಹಾಗೂ ನ್ಯೂಸ್ ಚಾನೆಲ್ ತಂಡಕ್ಕೆ ಮಾಹಿತಿ ನೀಡಿರುತ್ತಾರೆ.
ಒಬ್ಬ ಉಪತಹಶಲ್ದಾರ್ ಆಗಿ ತಾಲೂಕಿನ ಹೋಬಳಿ ಗ್ರಾಮಗಳ ಆಗುಹೋಗುಗಳ ಬಗ್ಗೆ ನಿಗಾ ವಹಿಸುವ ಅಧಿಕಾರಿಯಾಗಿ ಡ್ಯೂಟಿ ಮಾಡುವ ಸಮಯದಲ್ಲೇ, ಮದ್ಯಪಾನ ಮಾಡುವುದು ಎಷ್ಟು ಸರಿ? ಇವರು ಇನ್ನು ಯಾವ ರೀತಿ ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಾರೆ.
ಸರ್ಕಾರಿ ಅಧಿಕಾರಿಯಾಗಿ ಕರ್ತವ್ಯದ ಸಮಯದಲ್ಲಿ ಧೂಮಪಾನ ಮದ್ಯಪಾನ ಮಾಡುವುದು ಒಬ್ಬ ಸರ್ಕಾರಿ ಅಧಿಕಾರಿಯಾಗಿ ಎಷ್ಟು ಸರಿ? ಇದರ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಮೇಲಾಧಿಕಾರಿಗಳು ಗಮನ ವಹಿಸಬೇಕಾಗಿದೆ.
ಒಬ್ಬ ಉಪತಹಶೀಲ್ದಾರ್ ಆಗಿ ತಾಲೂಕಿನ ಹೋಬಳಿ ಗ್ರಾಮಗಳ ಆಗುಹೋಗುಗಳ ಬಗ್ಗೆ ನಿಗಾ ವಹಿಸುವ ಅಧಿಕಾರಿಯಾಗಿ ಡ್ಯೂಟಿ ಮಾಡುವ ಸಮಯದಲ್ಲೇ, ಮದ್ಯಪಾನ ಮಾಡುವುದು ಎಷ್ಟು ಸರಿ? ಇವರು ಇನ್ನು ಯಾವ ರೀತಿ ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಾರೆ.
ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಸಮಾಜದವರು ತಿಪಟೂರು ನಗರದ ಬಿಎಚ್ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿದರು ಇದೇ ಸಮಯದಲ್ಲಿ ತಾಲೂಕು ಶಾಸಕರಾದ ಷಡಕ್ಷರಿ ಅವರು ಉಪಸ್ಥಿತರಿದ್ದರು ತಾಲೂಕ್ ಶಾಸಕರುಗಳಾದ ಷಡಕ್ಷರಿ ಅವರು ನಾಡಿನ ಸಮಸ್ತ ಮುಸ್ಲಿಂ ಸಮಾಜದವರಿಗೆ ಆಶೀರ್ವಾದ ಮಾಡಿದರು ತಿದ್ದೂರ್ ನಗರದ ಬಿಲಾಲ್ ಮಸೀದಿ ಅಧ್ಯಕ್ಷರಾದ ಶಫಿವುಲ್ಲಾ ಶರೀಫ್ ನಾಡಿನ ಸಮಸ್ತ ಜನತೆಗೆ ರಂಜಾನ್ ಹಬ್ಬದ ಪ್ರಯುಕ್ತ ಶುಭ ಕೋರುತ ನಾಡಿನ ಎಲ್ಲ ಹಿಂದೂ ಮುಸ್ಲಿಂಗಗಳು ಅವಕ್ಯತೆಯಿಂದ ನಡೆದುಕೊಳ್ಳಬೇಕು ಎಂದು ಪ್ರಾರ್ಥಿಸಿದರು ಅಲ್ಲದೆ ಶಾಸಕರಿಗೆ ಎಲ್ಲ ಮುಸ್ಲಿಂ ಸಮಾಜದ ವತಿಯಿಂದ ಕೆಲ ಕಾಮಗಾರಿಗಳ ಮನವಿ ಪತ್ರವನ್ನು ಸಲ್ಲಿಸಿದರು ಜಿಲ್ಲಾ ಕಾಂಗ್ರೆಸ್ ಯುವ ಅಧ್ಯಕ್ಷರಾದ ನಿಖಿಲ್ ರಾಜಣ್ಣ ರಂಜಾನ್ ಹಬ್ಬದ ಶುಭ ಕೋರಿದರು ಮಾಜಿ ನಗರಸಭಾ ಅಧ್ಯಕ್ಷರಾದ ಪ್ರಕಾಶ್ ಕಿತ್ತೂರು ನಗರ ತಾಣ ಪೊಲೀಸ್ ಇನ್ಸೆಕ್ಟರ್ ವೆಂಕಟೇಶ್ ಸಕ್ರಿಯವಾಗಿ ಕಾರ್ಯನಿರ್ವಹಿಸಿದರು
Running a holiday sale or weekly special? Definitely promote it here to get customers excited about getting a sweet deal.
ಆರಕ್ಷಕವಾಣಿನ್ಯೂಸ್ನಲ್ಲಿ ನಾವು ಸಮಗ್ರತೆ, ನಿಖರತೆ ಮತ್ತು ಸೃಜನಶೀಲತೆಯನ್ನು ಗೌರವಿಸುತ್ತೇವೆ. ನಮ್ಮ ಓದುಗರಿಗೆ ಸತ್ಯವಾದ ಮತ್ತು ಪಕ್ಷಪಾತವಿಲ್ಲದ ಮಾಹಿತಿಯನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ ಮತ್ತು ನಮ್ಮ ಸಮುದಾಯಕ್ಕೆ ಸುದ್ದಿ ಮತ್ತು ಮಾಹಿತಿಯ ವಿಶ್ವಾಸಾರ್ಹ ಮೂಲವಾಗಲು ನಾವು ಶ್ರಮಿಸುತ್ತೇವೆ. ಉತ್ತಮ ವಿಷಯವು ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಅಪಾಯಗಳನ್ನು ತೆಗೆದುಕೊಳ್ಳುವ ಮತ್ತು ಹೊಸ ವಿಷಯಗಳನ್ನು ಪ್ರಯತ್ನಿಸುವ ಇಚ್ಛೆಯ ಫಲಿತಾಂಶವಾಗಿದೆ ಎಂದು ನಾವು ನಂಬುತ್ತೇವೆ.
ನಮ್ಮ ತಂಡವು ಪ್ರತಿಭಾವಂತ ಪತ್ರಕರ್ತರು, ಸಂಪಾದಕರು ಮತ್ತು ವಿನ್ಯಾಸಕಾರರಿಂದ ಮಾಡಲ್ಪಟ್ಟಿದೆ, ಅವರು ತಮ್ಮ ಕೆಲಸದ ಬಗ್ಗೆ ಆಸಕ್ತಿ ಹೊಂದಿದ್ದಾರೆ. ನಮ್ಮ ಓದುಗರಿಗೆ ಸಾಧ್ಯವಾದಷ್ಟು ಉತ್ತಮ ವಿಷಯವನ್ನು ತಲುಪಿಸಲು ನಾವು ಸಮರ್ಪಿತರಾಗಿದ್ದೇವೆ ಮತ್ತು ನಮ್ಮ ಕೆಲಸದ ಗುಣಮಟ್ಟದಲ್ಲಿ ನಾವು ಹೆಮ್ಮೆ ಪಡುತ್ತೇವೆ. ನಮ್ಮ ತಂಡವು ನಮ್ಮ ದೊಡ್ಡ ಆಸ್ತಿ ಎಂದು ನಾವು ನಂಬುತ್ತೇವೆ ಮತ್ತು ಅವರ ವೃತ್ತಿಪರ ಅಭಿವೃದ್ಧಿ ಮತ್ತು ಬೆಳವಣಿಗೆಯಲ್ಲಿ ಹೂಡಿಕೆ ಮಾಡಲು ನಾವು ಬದ್ಧರಾಗಿದ್ದೇವೆ.
ಮಧ್ಯಪ್ರಿಯರಿಗೆ ಶಾಕ್. ಜೂನ್ ಒಂದರಿಂದ ಆರರವರೆಗೆ ಮಧ್ಯ ಮಾರಾಟ ನಿಷೇಧಿಸಲಾಗಿದೆ. ಆರು ದಿನಗಳ ಕಾಲ ಮಧ್ಯ ಸಿಗುವುದಿಲ್ಲ.
ಬೆಂಗಳೂರು ಜಿಲ್ಲಾಡಳಿತ ಅಧಿಕೃತ ಆದೇಶ ಹೊರಡಿಸಿದೆ. ಲೋಕಸಭೆ ಚುನಾವಣೆಯ ಮತ ಎಣಿಕೆ ಮತ್ತು ವಿಧಾನ ಪರಿಷತ್ ಚುನಾವಣೆಯ ಸಂದರ್ಭದಲ್ಲಿ ಬಾರ್ ಗಳು ಮತ್ತು ಲಿಕ್ಕರ್ ಅಂಗಡಿಗಳು ಸುಮಾರು ಒಂದು ವಾರದವರೆಗೆ ಮುಚ್ಚಿರುತ್ತವೆ. ಆದರೂ ಸಹ ಇವರು ತಂಪು ಪಾನೀಯಗಳನ್ನು ಹಾಗೂ ಆಹಾರಗಳನ್ನು ತಮ್ಮ ಗ್ರಾಹಕರಿಗೆ ನೀಡಲು ಅನುಮತಿಸಲಾಗಿದೆ.
ಹಾಲಿ ಸದಸ್ಯರು ನಿವೃತ್ತಿ ಹೊಂದಿದ ನಂತರ ಜೂನ್ ಮೂರು ನಡೆಯಲಿರುವ ಕರ್ನಾಟಕ ವಿಧಾನ ಪರಿಷತ್ ಚುನಾವಣಾ ಸ್ಥಾನಗಳಲ್ಲಿ, ಜೂನ್ ಹಾರರಂದು ಮತ ಎಣಿಕೆ ಆರರಂದು ಮತ ಎಣಿಕೆ ನಡೆಯಲ
ಚಿಕ್ಕಮಗಳೂರಿನ ಕಾಫಿ ನಾಡಿನಲ್ಲೊಂದು ಅಮಾನವೀಯ ಘಟನೆ
ಕೌಟುಂಬಿಕ ಕಲಹಕ್ಕೆ ನಾಡ ಬಂದುಕಿನಿಂದ ಮೂವರ ಹತ್ಯೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ಈ ಘಟನೆ ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರಿನ ಕಡಬಗೆರೆ ಸಮೀಪ ಮಾಗುಲಿನಲ್ಲಿ ನಡೆದಿದೆ.
. ರತ್ನಾಕರ್ ಎಂಬುವನಿಂದ ಈ ಕೃತ್ಯ ನಡೆದಿದೆ ರತ್ನಾಕರ್ ಸ್ಥಳೀಯ ಖಾಸಗಿ ಶಾಲೆಯಲ್ಲಿ ಬಸ್ ಡ್ರೈವರ್ ಆಗಿ ಕೆಲಸ ಮಾಡ್ತಿದ್ದ ಈತನನ್ನು ಹೆಂಡತಿ ಬಿಟ್ಟು ಎರಡು ವರ್ಷಗಳಾಗಿವೆ ಸದ್ಯ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿರುವ ಸ್ವಾತಿ ಇಂದು ಹೆಂಡತಿಯ ಮನೆಗೆ ಬಂದ ರತ್ನಾಕರ್ ಅತ್ತೆ ನಾದಿನಿ ಮತ್ತು ತನ್ನ ಮಗಳನ್ನು ಕೊಂದು ನಾದಿನಿಯ ಗಂಡನ ಅವಿನಾಶ್ ಕಾಲಿಗೂ ಗುಂಡು ಹಾರಿಸಿದ್ದಾನೆ, ಅದೃಷ್ಟವಶಾತ್ ಪ್ರಾಣಪಾಯದಿಂದ ನಾದಿನಿಯ ಗಂಡ ಬಚಾವಾಗಿದ್ದಾರೆ. ಈ ಕೃತ್ಯದಲ್ಲಿ ಅತ್ತೆ ಜ್ಯೋತಿ (55), ಸಿಂಧು( 24 )ವರ್ಷ, ಮೌಲ್ಯ( 7 )ವರ್ಷ ಮೃತರು, ಬಾಳೆಹೊನ್ನೂರು ಪೊಲೀಸ್ ರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಈ ಕೃತ್ಯದ ನಂತರ ಮೂವರ ಕೊಲೆ ಮಾಡಿದ ಆರೋಪಿ ರತ್ನಾಕರ್ ತನ್ನ ಪತ್ನಿ ದೂರವಾದ ಬಳಿಕ ಎಲ್ಲರೂ ಮಗುವಿನ ಬಳಿ ತಾಯಿಯ ಬಗ್ಗೆ ಕೇಳುತ್ತಿದ್ದಾರೆ ಆದರೆ ಆಕೆ ಬಿಟ್ಟು ಹೋಗಿ ಎರಡು ವರ್ಷ ಆಗಿದೆ ನನ್ನ ಕುಟುಂಬದವರಿಗೆ ಯಾರಿಗೂ ತಿಳಿಸದೆ ಈ ನಿರ್ಧಾರವನ್ನು ಮಾಡಿರುತ್ತೇನೆ ಎಂದು 47 ಸೆಕೆಂಡ್ಗಳ ವಿಡಿಯೋ ಮಾಡಿ ಆರೋಪಿ ರತ್ನಾಕರನು ಮನೆಯ ಹಿಂಭಾಗದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಘಟನೆ ನಡೆದ ಸ್ಥಳಕ್ಕೆ ಚಿಕ್ಕಮಗಳೂರು ಎಸ್ಪಿ ವಿಕ್ರಮಆಮಟೆ, ಬಾಳೆಹೊನ್ನೂರು, ಪೊಲೀಸ್ ಠಾಣೆಯ ಪಿಎಸ್ಐ ರಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Are your customers raving about you on social media? Share their great stories to help turn potential customers into loyal ones.
Running a holiday sale or weekly special? Definitely promote it here to get customers excited about getting a sweet deal.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಕೆಮ್ಮಣ್ಣುಗುಂಡಿ ಸಮೀಪದ ಲಾಲ್ಬಾಗ್ ರಸ್ತೆಯಲ್ಲಿ ಈ ಘಟನೆ ನಡೆದಿದೆ.
ಅಂದಾಜು 35 ವರ್ಷದ ಕಾಡಾನೆ ಸಾವನ್ನಪ್ಪಿದೆ
ತಣಿಗೆ ಬೈಲು ಅರಣ್ಯ ವ್ಯಾಪ್ತಿಯ ಕಾಡಾನೆಯಂದು ಗುರುತಿಸಲಾಗಿದೆ, ಹಲಸಿನ ಹಣ್ಣು ತಿನ್ನಲು ಹೋಗಿ ವಿದ್ಯುತ್ ತಂತಿಗೆ ತಗುಲಿಕಾಡನೆ ಸಾವನ್ನಪ್ಪಿದೆ.
ಆನೆಗಳು ಓಡಾಡುವ ಜಾಗದಲ್ಲಿ ವಿದ್ಯುತ್ ತಂತಿಗಳು ನಿರ್ಮಾಣ ಮಾಡಿರುವುದರಿಂದ ಕಾಡಾನೆ ಸಾವನ್ನಪ್ಪಿದೆ.
ಈ ಹಿಂದೆಯೂ ಈ ಪ್ರಕರಣಗಳು ನಡೆದಿದ್ದರೂ ಅರಣ್ಯ ಇಲಾಖೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗದಿರುವುದು ಅನುಮಾನ ಸೃಷ್ಟಿಸಿದೆ.
ಸ್ಥಳಕ್ಕೆ ಆಗಮಿಸಿ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ರೀತಿ ಅವಗಡೊಗಳು ಆಗದಂತೆ ಮೆಸ್ಕಾಂ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕೆಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ
ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ತಲಗೂರು ಹ್ಯಾಂಡ್ ಪೋಸ್ಟ್ ನಿಂದ ಕುಂದೂರಿನವರೆಗೆ ಗ್ರಾಮಸ್ಥರ ಜಾಥಾ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೂವೆ ಗ್ರಾಮ ಪಂಚಾಯಿತಿಯ ತಲಗೂರು ಹ್ಯಾಂಡ್ ಪೋಸ್ಟ್ ನಿಂದ ಕುಂದೂರಿನವರೆಗೆ ರಸ್ತೆ ಸಂಪೂರ್ಣ ಹದಗೆಟ್ಟಿದೆ. ತಲಗೂರು ಗ್ರಾಮಸ್ಥರು ಹಾಗೂ ಹಲವಾರು ಗ್ರಾಮಸ್ಥರು ಸೇರಿದಂತೆ ರಸ್ತೆಯ ಅವ್ಯವಸ್ಥೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ತಲಗೂರು ಗ್ರಾಮದಿಂದ ಸುಮಾರು 10 ಕಿ.ಮ
ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ತಲಗೂರು ಹ್ಯಾಂಡ್ ಪೋಸ್ಟ್ ನಿಂದ ಕುಂದೂರಿನವರೆಗೆ ಗ್ರಾಮಸ್ಥರ ಜಾಥಾ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೂವೆ ಗ್ರಾಮ ಪಂಚಾಯಿತಿಯ ತಲಗೂರು ಹ್ಯಾಂಡ್ ಪೋಸ್ಟ್ ನಿಂದ ಕುಂದೂರಿನವರೆಗೆ ರಸ್ತೆ ಸಂಪೂರ್ಣ ಹದಗೆಟ್ಟಿದೆ. ತಲಗೂರು ಗ್ರಾಮಸ್ಥರು ಹಾಗೂ ಹಲವಾರು ಗ್ರಾಮಸ್ಥರು ಸೇರಿದಂತೆ ರಸ್ತೆಯ ಅವ್ಯವಸ್ಥೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ತಲಗೂರು ಗ್ರಾಮದಿಂದ ಸುಮಾರು 10 ಕಿ.ಮೀ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಈ ಸಂದರ್ಭದಲ್ಲಿ ಮೈದಿನ್ ಕಾಕಾ ಹಾಗೂ ಗ್ರಾಮಸ್ಥರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ರಸ್ತೆ ತಲಗೂರು ಸಾರ್ಗೋಡ್ ಕುಂದೂರು ಸೇರಿದಂತೆ ಮೂಡಿಗೆರೆ ಕಲ್ಪಿಸುವ ಮುಖ್ಯ ಅಡ್ಡರಸ್ತೆ ಆಗಿದೆ. ಈ ಗ್ರಾಮದ ಭಾಗಗಳಲ್ಲಿ ಮೂಲಸೌಕರ್ಯಗಳು ಲಭ್ಯವಿಲ್ಲ ಎಂದು ಗ್ರಾಮಸ್ಥರು ಹೇಳಿದರು. ಈ ಗ್ರಾಮಗಳಲ್ಲಿ ಶಾಸಕರು ಭೇಟಿ ನೀಡಿ ಸಾರ್ವಜನಿಕರ ಕೊಂದು ಕೊರತೆಗಳನ್ನು ಸರಿಪಡಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದರು. ರಸ್ತೆ ಸರಿ ಇಲ್ಲದ ಕಾರಣ ಅಲ್ಲಿ ಓಡಾಡುವ ಬಸ್ಸುಗಳು ಎರಡು ದಿನಕ್ಕೊಮ್ಮೆ ಕೆಟ್ಟು ನಿಲ್ಲುತ್ತವೆ, ಇದರಿಂದ ಶಾಲೆಗೆ ಹೋಗುವ ಮಕ್ಕಳಿಗೆ ತೊಂದರೆ ಆಗುತ್ತಿದೆ ಎಂದು ಗ್ರಾಮಸ್ಥರು ಹೇಳಿದರು.
ಕನ್ನಡ ಪರ ಸಂಘಟನೆಗಳಿಂದ ಚಾಮುಂಡಿ ಬೆಟ್ಟ ಉಳಿವಿಗಾಗಿ ಪಾದಯಾತ್ರೆ
ಮೈಸೂರು: ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿಗೆ ಒತ್ತಾಯಿಸಿ ಸಧ್ಯದಲ್ಲೇ ವಿವಿಧ ಕನ್ನಡ ಪರ ಸಂಘಟನೆಗಳ ಜೊತೆ ಗೂಡಿ ಬೃಹತ್ ಪಾದಯಾತ್ರೆ ಮಾಡುವುದಾಗಿ ಕನ್ನಡ ಚುಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ತಿಳಿಸಿದ್ದಾರೆ.
ಕಳೆದ ಎರಡು,ಮೂರು ವರ್ಷಗಳ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ಚಾಮುಂಡಿ ಬೆಟ್ಟದ ನಂದಿ ಮಾರ್ಗ ಕುಸಿದು ಬಿದ್ದಿತ್ತು.
ಅದಾಗಿ ಮೂರು ವರ್ಷಗಳೇ
ಕನ್ನಡ ಪರ ಸಂಘಟನೆಗಳಿಂದ ಚಾಮುಂಡಿ ಬೆಟ್ಟ ಉಳಿವಿಗಾಗಿ ಪಾದಯಾತ್ರೆ
ಮೈಸೂರು: ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿಗೆ ಒತ್ತಾಯಿಸಿ ಸಧ್ಯದಲ್ಲೇ ವಿವಿಧ ಕನ್ನಡ ಪರ ಸಂಘಟನೆಗಳ ಜೊತೆ ಗೂಡಿ ಬೃಹತ್ ಪಾದಯಾತ್ರೆ ಮಾಡುವುದಾಗಿ ಕನ್ನಡ ಚುಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ತಿಳಿಸಿದ್ದಾರೆ.
ಕಳೆದ ಎರಡು,ಮೂರು ವರ್ಷಗಳ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ಚಾಮುಂಡಿ ಬೆಟ್ಟದ ನಂದಿ ಮಾರ್ಗ ಕುಸಿದು ಬಿದ್ದಿತ್ತು.
ಅದಾಗಿ ಮೂರು ವರ್ಷಗಳೇ ಕಳೆದರೂ ಸರಿಪಡಿಸುವ ಕಾರ್ಯ ಆರಂಭವಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಾಮುಂಡಿ ಬೆಟ್ಟದಲ್ಲಿ ಅನೇಕ ಕುಟುಂಬಗಳು ವಾಸವಾಗಿವೆ,ಅಲ್ಲದೆ ದೇಶ ವಿದೇಶಗಳಿಂದ ಪ್ರತಿದಿನ ಸಾವಿರಾರು ಪ್ರವಾಸಿಗರು ಚಾಮುಂಡಿ ಬೆಟ್ಟಕ್ಕೆ ಆಗಮಿಸುತ್ತಾರೆ.
ಯಾರಿಗಾದರೂ ಆರೋಗ್ಯದಲ್ಲಿ ಏರು ಪೇರು ಉಂಟಾದರೆ ಪ್ರಥಮ ಚಿಕಿತ್ಸೆ ಮಾಡಲು ಬೆಟ್ಟದಲ್ಲಿ ಸುಸಜ್ಜಿತವಾದ ಆಸ್ಪತ್ರೆ ಇಲ್ಲ,ಅಷ್ಟೇ ಏಕೆ ತುರ್ತು ಚಿಕಿತ್ಸಾ ವಾಹನ ವ್ಯವಸ್ಥೆ ಕೂಡ ಇಲ್ಲದಿರುವುದು ದುರಂತದ ಸಂಗತಿ ಎಂದು ತೇಜಸ್ವಿ ಬೇಸರ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಆಡಳಿತಾಧಿಕಾರಿಗಳಿಗೆ ತುರ್ತು ಚಿಕಿತ್ಸಾ ವಾಹನ (ಅಂಬುಲೆನ್ಸ್) ವಾಹನ 24/7 ವ್ಯವಸ್ಥೆ ಮಾಡುವಂತೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ದೂರಿದ್ದಾರೆ.
ನಂದಿ ರಸ್ತೆ ದುರಸ್ತಿ, ಸುಸಜ್ಜಿತವಾದ ಆಸ್ಪತ್ರೆಯ ನಿರ್ಮಾಣ, ತುರ್ತು ಚಿಕಿತ್ಸಾ ವಾಹನ ನೀಡುವುದೂ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ
ಇದೇ ಡಿಸೆಂಬರ್ ನಲ್ಲಿ ಪಾದಯಾತ್ರೆ ಹಮ್ಮಿಕೊಂಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಲವು ಕನ್ನಡಪರ ಸಂಘಟನೆಗಳ ಜೊತೆಗೂಡಿ ನೂರೊಂದು ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅಗ್ರಹಾರ ವೃತ್ತದಿಂದ ಚಾಮುಂಡಿ ಬೆಟ್ಟದ ದೇವಸ್ಥಾನದ ವರೆಗೂ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ತಿಳಿಸಿದ್ದಾರೆ.
*ಸರಳ ವಿವಾಹವೇ ಮಂತ್ರ ಮಾಂಗಲ್ಯ..* ಸೂರಿ ಶ್ರೀನಿವಾಸ್, ಜಿಲ್ಲಾಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ ಚಿಕ್ಕಮಗಳೂರು.
ಅಜ್ಜಂಪುರ ಪಟ್ಟಣದ ಬೃಂದಾವನ ಕನ್ವೆನ್ಷನ್ ಹಾಲಿನಲ್ಲಿ ನಡೆದ ಮಂತ್ರ ಮಾಂಗಲ್ಯ ಕಾರ್ಯಕ್ರಮವನ್ನು ಕುರಿತು ಮಾತನಾಡುತ್ತಾ ಇಂದಿನ ಯುವ ಪೀಳಿಗೆಗೆ ಮಂತ್ರ ಮಾಂಗಲ್ಯ ಮದುವೆಯೇ ಮಾದರಿಯಾಗಿದೆ. ಈ ಸಂದೇಶವನ್ನು ವಿಶ್ವಮಾನವ ಪರಿಕಲ್ಪನೆಯನ್ನು ಕುವೆಂಪುರವರು ಈ ಜಗತ್ತಿಗೆ ನೀಡಿದ ಮೊಟ್ಟಮೊದಲ ವ್ಯಕ್ತಿಯಾಗಿದ್ದ
*ಸರಳ ವಿವಾಹವೇ ಮಂತ್ರ ಮಾಂಗಲ್ಯ..* ಸೂರಿ ಶ್ರೀನಿವಾಸ್, ಜಿಲ್ಲಾಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ ಚಿಕ್ಕಮಗಳೂರು.
ಅಜ್ಜಂಪುರ ಪಟ್ಟಣದ ಬೃಂದಾವನ ಕನ್ವೆನ್ಷನ್ ಹಾಲಿನಲ್ಲಿ ನಡೆದ ಮಂತ್ರ ಮಾಂಗಲ್ಯ ಕಾರ್ಯಕ್ರಮವನ್ನು ಕುರಿತು ಮಾತನಾಡುತ್ತಾ ಇಂದಿನ ಯುವ ಪೀಳಿಗೆಗೆ ಮಂತ್ರ ಮಾಂಗಲ್ಯ ಮದುವೆಯೇ ಮಾದರಿಯಾಗಿದೆ. ಈ ಸಂದೇಶವನ್ನು ವಿಶ್ವಮಾನವ ಪರಿಕಲ್ಪನೆಯನ್ನು ಕುವೆಂಪುರವರು ಈ ಜಗತ್ತಿಗೆ ನೀಡಿದ ಮೊಟ್ಟಮೊದಲ ವ್ಯಕ್ತಿಯಾಗಿದ್ದಾರೆ. ಈ ಯೋಚನೆ ಜಾತಿ ಮತ ಪಂಥಗಳ ಮೀರಿದ ಪರಿಕಲ್ಪನೆ. ಕುಟುಂಬಗಳ ಪರಿಕಲ್ಪನೆಯನ್ನು ವಧು-ವರರಲ್ಲಿ ಹುಟ್ಟು ಹಾಕಿದ್ದೆ ಕುವೆಂಪುರವರು.
ಸಮ ಸಮಾಜದ ಸಮಾನತೆ ಸಂದೇಶವನ್ನು ಸಾರಿದ ಕುವೆಂಪುರವರು ನೈಜ ಜೀವನದ ಅರಿವನ್ನು ಮೂಡಿಸಿದವರು. ತಮ್ಮ ಮಕ್ಕಳಿಗೆ ಮಂತ್ರ ಮಾಂಗಲ್ಯದ ಮದುವೆ ಮಾಡುವುದರ ಮುಖಾಂತರ ಮದುವೆಗಳು ಸರಳವಾಗಿ ಯಾವುದೇ ಆಡಂಬರವಿಲ್ಲದೆ ಮದುವೆ ಮಾಡಿದರು.
ಮದುವೆ ಎಂಬುವುದು ಮನಸು ಮನಸುಗಳ ಬೆಸೆಯುವ ಒಂದು ಕಲ್ಪನೆ ಕುಟುಂಬ ಕುಟುಂಬಗಳು ಒಂದುಗೂಡುವ ಸಮಯ ವಧು ವರರು ವಾಸ್ತವತೆಯನ್ನು ಅರಿತು ಜೀವನವನ್ನು ನಡೆಸಬೇಕು. ಅರಿವು ಎಂಬುದು ತುಂಬಾ ಮುಖ್ಯವಾಗಿದೆ. ದಾಂಪತ್ಯ ಜೀವನಕ್ಕೆ ಶ್ರೀ ರಾಮಕೃಷ್ಣ ಪರಮಹಂಸರು ಶಾರದಾದೇವಿಯವರು ಭಾಷ್ಯ ಬರದ ಮಹಾಜೀವಿಗಳು. ಅವರ ಬದುಕಿನ ಆದರ್ಶವೇ ಜೀವನದ ದಾರಿದೀಪವಾಗಬೇಕು. ಮೌಲ್ಯಗಳಿಂದ ದಾಂಪತ್ಯ ಜೀವನ ನಡೆಯಬೇಕು.
ಶಶಿಕಲಾ ಮತ್ತು ಪವನ್ ರವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಅವರು ಇಂದಿನ ದಿನವನ್ನು ಸುವರ್ಣ ಅಕ್ಷರಗಳಲ್ಲಿ ಬರೆದಿಡುವ ದಿನವಾಗಿದೆ ಎಂದು ಅವರಿಗೆ ಶುಭ ಹಾರೈಸಿದರು. ಎರಡು ಕುಟುಂಬದವರು ಒಪ್ಪಿಸಮ್ಮತಿಸಿ ಏನ್ ನಿರ್ಧಾರವನ್ನು ತೆಗೆದುಕೊಂಡಿದ್ದು ಅಜ್ಜಂಪುರ ನೆಲಕ್ಕೆ ಸಾಕ್ಷಿಯಾಗಿದೆ ಇತಿಹಾಸವನ್ನು ಬಲ್ಲವರು ಮಾತ್ರ ಇತಿಹಾಸವನ್ನು ಸೃಷ್ಟಿಸಬಲ್ಲರು. ಇಬ್ಬರು ಮನಸ್ಸುಗಳು ಮಿಲನವಾಗಿ ದಾಂಪತ್ಯ ಜೀವನ ಸುಖವಾಗಿರಲಿ ಮಂತ್ರ ಮಾಂಗಲ್ಯವನ್ನು ಉಚ್ಛಾರಿಸುವುದರ ಮುಖಾಂತರ ಎಂದು ಆಶೀರ್ವದಿಸಿದರು..
ತರೀಕೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರವಿ ದಳವಾಯಿ ಅವರು ಮಾತನಾಡುತ್ತಾ ಮಂತ್ರ ಮಾಂಗಲ್ಯ ಎಂಬ ಪರಿಕಲ್ಪನೆ ನಮ್ಮ ಜನರಲ್ಲಿರುವ ಆಸಕ್ತಿ ಕುತೂಹಲವನ್ನು ಕೆರಳಿಸಿದೆ. ಈ ಪರಿಸರಕ್ಕೆ ಬದಲಾವಣೆ ಗಾಳಿ ಬೀಸಿದೆ. ಮನಸುಗಳ ಬೆಸೆಯುವ ಈ ಮದುವೆ ಎರಡು ಕುಟುಂಬಗಳು ಕೂಡಿ ಮಾಡುವ ಮದುವೆ ಆಡಂಬರವಿಲ್ಲದೆ ಸರಳ ಸುಂದರವಾಗಿ ವ್ಯವಸ್ಥಿತವಾಗಿ ಆಚರಿಸುತ್ತಿರುವುದು ನಮ್ಮ ಕುಟುಂಬದ ಹೆಮ್ಮೆ ಎಂದು ಹೇಳಿದರು. ಕುವೆಂಪುರವರ ಮಕ್ಕಳಾದ ಪೂರ್ಣಚಂದ್ರ ತೇಜಸ್ವಿ. ಇಂದುಕಲಾ, ತಾರಿಣಿ ಇವರನ್ನು ಅಂತರ ಮಾಂಗಲ್ಯದ ಮೂಲಕವೇ ವಿವಾಹ ಮೊದಲು ಅವರ ಕುಟುಂಬವನ್ನು ಆಚರಣೆಗೆ ತಂದು ಇತರರಿಗೆ ಆದರ್ಶ ವ್ಯಕ್ತಿ ಆದವರು ಕುವೆಂಪುರವರು. ಈ ಮದುವೆಯಲ್ಲಿ ಜ್ಯೋತಿಷ್ಯ ನೋಡುವಂತಿಲ್ಲ ಸಮಯದ ನಿಗದಿ ಹಿರಿಯರ ಆಜ್ಞೆಯಂತೆ ಮಂತ್ರ ಉಚ್ಛಾರದ ಮೂಲಕ ತಾಳಿ ಕಟ್ಟುವುದು, ಸರಳ ನಿಯಮಗಳೇ ಮದುವೆ ಆಚರಣೆ .ಸರಳತೆಯೇ ಶ್ರೇಷ್ಠ ಈ ಮದುವೆಯಲ್ಲಿ ಮಂತ್ರ ಮಾಂಗಲ್ಯದ ಉಚ್ಚಾರಣೆಯ ಮೂಲಕ ಮದುವೆ ನಡೆಯುತ್ತಿರುವುದೇ ವಿಶೇಷ. ಇದು ಇತರರಿಗೂ ಮಾದರಿಯಾಗಬೇಕು ಎಂದು ಹೇಳಿದರು. ವಧು-ವರರಿಗೆ ಶುಭಾಶಯ ಕೋರಿ ಕುಟುಂಬದವರಿಗೆ ಅಭಿನಂದನೆಯನ್ನು ಸಲ್ಲಿಸಿದರು.
ಪ್ರಾಸ್ತಾವಿಕ ನುಡಿಯನ್ನು ಅಜ್ಜಂಪುರ ನಾಗರಾಜ್, ಶಿಕ್ಷಕರು ಮಾತನಾಡುತ್ತಾ ಮದುವೆ ಇಂದು ವ್ಯಾಪಾರಿಕರಣವಾಗಿದೆ ವರದಕ್ಷಿಣೆ ಎಂಬುದು ಸಾಮಾಜಿಕ ಪಿಡುಗಾಗಿದೆ. ಅಂತಹ ಕಾಲಘಟ್ಟದಲ್ಲಿ ಎರಡು ಹೃದಯಗಳನ್ನು ಬೆಸೆಯುತ್ತಿರುವ ಈ ಮದುವೆ ಸರಳ ವಿವಾಹ ಪದ್ಧತಿ ಪರಿಕಲ್ಪನೆಯಾಗಿದೆ. 1960ರ ದಶಕದಲ್ಲಿ ಗೊಡ್ಡು ಸಂಪ್ರದಾಯಗಳನ್ನು ಗಾಳಿಗೆ ತೂರಿ ಆಡಂಬರವಿಲ್ಲದೆ ಸರಳ ವಿವಾಹವನ್ನು ಮಾಡಿ ತೋರಿಸಿದವರು ಕುವೆಂಪುರವರು. ಇದರಲ್ಲಿ ತೇಜಸ್ವಿ ಅವರ ಪಾತ್ರ ಬಹಳ ಮುಖ್ಯವಾಗಿದೆ. ನುಡಿದಂತ ನಡೆದವರು ಇವರು. ಪ್ರಪಂಚವನ್ನು ಅಥವಾ ವ್ಯಕ್ತಿಯನ್ನು ಬದಲಾಯಿಸಲು ಹೋಗಬೇಡಿ. ಅದಕ್ಕೆ ಬದಲಾಗಿ ನೀವೇ ಬದಲಾಗಿ ಎಂಬ ಕಿವಿ ಮಾತನ್ನು ಕುವೆಂಪುರವರು ಹೇಳಿದರು
ಅದಕ್ಕೆ ಪ್ರಾಮಾಣಿಕತೆ ಬದ್ಧತೆ ಬಹಳ ಅವಶ್ಯಕ ಎಂದರು. ಮದುವೆಗಳು ಆದರ್ಶ ಮತ್ತು ಮೌಲ್ಯಗಳನ್ನು ಎತ್ತಿ ಹಿಡಿಯುವಂತಿರಬೇಕು, ಮೂಡಿಗೆರೆಯ ಚಿತ್ರಕೂಟದಲ್ಲಿ. ಪೂರ್ಣಚಂದ್ರ ತೇಜಸ್ವಿ ಮತ್ತು ರಾಜೇಶ್ವರಿ ವಿವಾಹದ ಮೂಲಕ ಕೆಲವೇ ಕೆಲವು ಹಿತೈಷಿಗಳ ಸಾರಥ್ಯದಲ್ಲಿ ಎರಡು ಕುಟುಂಬಗಳ ನೇತೃತ್ವದಲ್ಲಿ ಸಮಾಜಕ್ಕೆ ಸಾಹಿತ್ಯದ ಮೂಲಕ ಸಂದೇಶವನ್ನು ನೀಡಿದರು. ತೇಜಸ್ವಿ ಅವರ ಲಗ್ನ ಪತ್ರಿಕೆ ಕುವೆಂಪುರವರ ಕೈ ಬರಹದಲ್ಲಿತ್ತು ಸಮಯ ಬಿದ್ದಾಗ ಬಂದು ವಧು ವರರನ್ನು ಆಶೀರ್ವದಿಸಿ ಎಂಬ ಅಂಶ ಬಹಳ ಗಮನ ಸೆಳೆಯಿತು. ಇದಕ್ಕೆ ಕಡಿದಾಳ್ ಮಂಜಣ್ಣ, ಶ್ರೀ ರಾಮ್, ಸುಂದರೇಶ್, ಈ ಮದುವೆಯನ್ನು ಸಾಕ್ಷಿಕರಿಸಿದವರು.
ಈ ಮದುವೆಯಲ್ಲಿ ದೇವರ ಮನೆಯ ಶ್ಲೋಕಗಳೇ ಮಂತ್ರ ಮಾಂಗಲ್ಯದ ಶ್ಲೋಕಗಳು, ಹಿಂದಿನ ಕಾಲದಲ್ಲಿ ಸಂಸ್ಕೃತದಲ್ಲಿದ್ದ ಈ ಶ್ಲೋಕಗಳನ್ನು ಆಡು ಭಾಷೆಗೆ ಸರಳಿಕರಿಸಿ ಕೆಲವೊಂದು ನಿಬಂಧನೆಯ ಮೂಲಕ ಕಾಲಕಾಲಕ್ಕೆ ಹೊಂದಿಕೊಳ್ಳುವ ಮೂಲಕ ಮುಖಾಂತರ ಮಂತ್ರ ಮಾಂಗಲ್ಯವನ್ನು ಜಾರಿಗೆ ತಂದರು
ಫಲ ತಾಂಬೂಲದ ಬದಲಾಗಿ. ಚಿಕ್ಕ ಪುಸ್ತಕವನ್ನು ಉಡುಗೊರೆಯಾಗಿ ನೀಡುವುದು ಇದು ಮಂತ್ರ ಮಾಂಗಲ್ಯದ ಪರಿಕಲ್ಪನೆಯಾಗಿದೆ ಎಂದರು.
ಈ ಸಮಾರಂಭದಲ್ಲಿ ಲೋಕೇಶಪ್ಪ ಹಿರಿಯ ಉಪ ನೊಂದಣಿ ಅಧಿಕಾರಿಗಳು. ಮಾತನಾಡುತ್ತಾ ಕುವೆಂಪುರವರು ಸರಳವಾಗಿ ಬದುಕಿ ತೋರಿಸಿದವರು ಇಡೀ ವಿಶ್ವಕ್ಕೆ ವಿಶ್ವಮಾನವ ಸಂದೇಶವನ್ನು ಸಾರಿದ ಮಹಾ ಚೇತನ ಅವರು. ಅವರ ಸತ್ವ ಎಲ್ಲೆಡೆಗೆ ಪಸರಿಸಲಿ. ಅಂತಹ ಮಹಾತ್ಮರ ಮಾತನ್ನು ಸಾಕ್ಷಿಕರಿಸಿದವರು ಈ ನೆಲದ ಮನುಜರು. ಕುವೆಂಪುರವರು ಸಮಯಕ್ಕೆ ಕೊಡುತ್ತಿದ್ದ ಮಹತ್ವವನ್ನು ವಿವರಿಸಿದರು. ಸರಳ ಬದುಕೇ ಜೀವನ ಎಂದು ಜೀವಿಸಿದ ಮಹಾಚೇತನ ಅವರು ಎಂದರು.
ಆನಂದ್ ಸಹ ಪ್ರಾಧ್ಯಾಪಕರು ಅಜ್ಜಂಪುರ ಇವರು ಮಾತನಾಡಿ ನಮ್ಮ ಯೋಚನೆಗಳು ಆದರ್ಶವಾಗಿರಬೇಕು. ನಮ್ಮ ಭಾರತದಂತ ದೇಶದಲ್ಲಿ ಒಂದು ವರ್ಷಕ್ಕೆ 10 ಲಕ್ಷ ಕೋಟಿ ಹಣದ ವ್ಯವಹಾರ ನಡೆಯುತ್ತದೆ. ಮದುವೆ ನಂತರ ಕುಟುಂಬ ಕಟ್ಟುವುದು ತುಂಬಾ ಮುಖ್ಯ ಅದಕ್ಕೆ ಮದುವೆ ಎಂಬುದು ನಿರಾಭರಣ ಸುಂದರಿ ಎಂದು ವಿಶ್ವಮಾನವ ಕುವೆಂಪುರವರು ಹೇಳಿದರು.
ಎ ಸಿ ಚಂದ್ರಪ್ಪ ಕಲಾ ಪೋಷಕರು ಮಾತನಾಡಿ ಸಾಹಿತ್ಯದ ಮೂಲಕ ಮರ ಪರಿವರ್ತನೆ ಮಾಡುತ್ತಿರುವ ಈ ಮಂತ್ರ ಮಾಂಗಲ್ಯದ ಪರಿಕಲ್ಪನೆ ಬಹಳ ವಿಶೇಷವಾಗಿದೆ. ಹಾಗೂ ಆಸಕ್ತಿಯುತವಾಗಿಯೂ ಸಹ ಇದೆ ಮಂತ್ರ ಮಾಂಗಲ್ಯದ ಮೂಲಕ ಸರಳ ಮದುವೆಗಳು ಜಾರಿಗೆ ಬರಲಿ ಎಂದು ಆಶಿಸಿದರು.
ಈ ಮದುವೆ ಕಾರ್ಯಕ್ರಮವನ್ನು ಪ್ರಸಾದ್ ರವರು ನಿರೂಪಿಸಿದರು. ಪ್ರಕಾಶ್ ರವರು ಸ್ವಾಗತ ಕೋರಿದರು ಪತ್ರಕರ್ತರಾದ ವೆಂಕಟೇಶ, ತ.ಮ. ದೇವಾನಂದ, ವಧು ವರರಾದ ಪವನ್ ಆರ್ ಮತ್ತು ಶಶಿಕಲಾ ಸಿ.ಎಸ್ ಹಾಗೂ ವಧು ವರರ ತಂದೆ ತಾಯಿ ಅವರಾದ ಶ್ರೀಮತಿ ಕಮಲ, ರುದ್ರಮೂರ್ತಿ ಹಾಗೂ ಶ್ರೀಮತಿ ಸುಮಿತ್ರಾ, ಶ್ರೀನಿವಾಸ ಮತ್ತು ಎರಡು ಕುಟುಂಬದವರು ಹಾಗೂ ಬಂಧು ಮಿತ್ರರು ಸ್ನೇಹಿತರು ಹಿತೈಷಿಗಳು ಉಪಸ್ಥಿತರಿದ್ದರು. ಎಲ್ಲರೂ ವಧು-ವರರಿಗೆ ಆಶೀರ್ವಾದ ಮಾಡಿ ಶುಭಕೋರಿದರು.
*ಲಕ್ಕವಳ್ಳಿ :-ಮಾನವನಿಗೆ ಅಸಾಧ್ಯವಾದದ್ದು ಯಾವುದು ಇಲ್ಲ ಮದ್ಯ ವರ್ಜನ ಶಿಬಿರಾರ್ಥಿಗಳು ದೃಢಸಂಕಲ್ಪ ಮಾಡಿ ಕುಡಿತದಿಂದ ದೂರವಿದ್ದು ಇಂದಿನಿಂದ ಹೊಸ ಜೀವನ ಪ್ರಾರಂಭಿಸಿ ನೆಮ್ಮದಿಯಿಂದ ಬಾಳಬೇಕು ಎಂದು ಶ್ರೀ ಷ.ಬ್ರ.ಮರುಳಸಿದ್ದ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀ ಶೈಲ ಶಾಖಾಹಿರೇಮಠ ಹಣ್ಣೇ ಎಂದು ಆಶೀರ್ವಚನ ನೀಡಿದರು.*
*ಲಕ್ಕವಳ್ಳಿಯ ಶ್ರೀ ಮಹಾಗಣಪತಿ ಸಮುದಾಯ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃ
*ಲಕ್ಕವಳ್ಳಿ :-ಮಾನವನಿಗೆ ಅಸಾಧ್ಯವಾದದ್ದು ಯಾವುದು ಇಲ್ಲ ಮದ್ಯ ವರ್ಜನ ಶಿಬಿರಾರ್ಥಿಗಳು ದೃಢಸಂಕಲ್ಪ ಮಾಡಿ ಕುಡಿತದಿಂದ ದೂರವಿದ್ದು ಇಂದಿನಿಂದ ಹೊಸ ಜೀವನ ಪ್ರಾರಂಭಿಸಿ ನೆಮ್ಮದಿಯಿಂದ ಬಾಳಬೇಕು ಎಂದು ಶ್ರೀ ಷ.ಬ್ರ.ಮರುಳಸಿದ್ದ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀ ಶೈಲ ಶಾಖಾಹಿರೇಮಠ ಹಣ್ಣೇ ಎಂದು ಆಶೀರ್ವಚನ ನೀಡಿದರು.*
*ಲಕ್ಕವಳ್ಳಿಯ ಶ್ರೀ ಮಹಾಗಣಪತಿ ಸಮುದಾಯ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆ ಬಿ ಸಿ ಟ್ರಸ್ಟ್ (ರಿ )ತರೀಕೆರೆ , ಅಖಿಲ ಕರ್ನಾಟಕ ರಾಜ್ಯ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ)ಬೆಳ್ತಂಗಡಿ, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಚಿಕ್ಕಮಗಳೂರು,ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ,ಮದ್ಯ ವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಲಕ್ಕವಳ್ಳಿ,ಶ್ರೀ ಮಹಾಗಣಪತಿ ಸಮುದಾಯದ ಭವನ ಲಕ್ಕವಳ್ಳಿ, ಗ್ರಾಮ ಪಂಚಾಯತ್ ಲಕ್ಕವಳ್ಳಿ, ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಲಕ್ಕವಳ್ಳಿ ವಲಯ ಇವರ ಸಂಯುಕ್ತಾಶ್ರಯದಲ್ಲಿ ಪರಮ ಪೂಜ್ಯ ಪದ್ಮವಿಭೂಷಣ ಶ್ರೀ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಮತ್ತು ಮಾತೃಶ್ರೀ ಹೇಮಾವತಿ ವಿ ಹೇಗಡೆ ಕೃಪಾಶೀರ್ವಾದಗಳೊಂದಿಗೆ 8 ದಿನಗಳ ಕಾಲ ಹಮ್ಮಿಕೊಂಡಿ ರುವ 1890ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡುತ್ತಾ ಕುಡಿತದಿಂದ ನಿಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ. ಇದರಿಂದ ನಿಮ್ಮ ಆರೋಗ್ಯ, ದುಡ್ಡು, ಸಮಾಜ ಹಾಗೂ ನಿಮ್ಮ ಕುಟುಂಬವೇ ಹಾಳಾಗಿ ನೀವು ಬೀದಿಗೆ ಬರುತ್ತೀರಿ. ಈ ಕುಡಿತದಿಂದ ಮುಕ್ತರಾಗಿ ಸುಖ ಜೀವನ ನಡೆಸಿ, ಸಮಾಜದಲ್ಲಿರುವ ಪ್ರತಿಯೊಬ್ಬನಿಗೂ ಸಂಸ್ಕಾರ ಕೊಡುವ ಕಾರ್ಯ ನಡೆಯಬೇಕು. ಒಬ್ಬ ವ್ಯಕ್ತಿಯನ್ನು ಪರಿವರ್ತನೆ ಮಾಡಿ ಸಂಸ್ಕಾರ ಕೊಡುವ ಕಾರ್ಯಶ್ರೇಷ್ಠ ಹಾಗೂ ಪುಣ್ಯದ ಕಾರ್ಯ, ಇಂತಹ ಶಿಬಿರಗಳು ಸಮಾಜಕ್ಕೆ ಮಾದರಿಯಾಗಿದೆ,ಆಕಸ್ಮಿಕವಾಗಿ ಕಲಿತ ಕುಡಿತದ ಚಟದಿಂದ ನಿಮ್ಮ ಆರೋಗ್ಯ ಹಾಳಾಗುವುದರ ಜೊತೆಗೆ ನಿಮ್ಮ ಕುಟುಂಬ ಸಂಕಷ್ಟಕ್ಕೆ ಒಳಗಾಗುತ್ತದೆ. ಮದ್ಯವರ್ಜನ ಶಿಬಿರದಲ್ಲಿ 53 ಮಂದಿಯ ಕುಡಿತ ಬಿಡಿಸಲು ಸಾವಿರಾರು ಮಂದಿ ಕೆಲಸ ಮಾಡಿದ್ದಾರೆ. ಸಮಾಜದಲ್ಲಿ ಕುಡುಕರನ್ನು ಕೆಟ್ಟ ದೃಷ್ಟಿಯಲ್ಲಿ ನೋಡುತ್ತಾರೆ. ಇಂದು ನೀವು ನವಜೀವನದ ಹಾದಿಯಲ್ಲಿ ಕಾಲಿಟ್ಟಿದಿರಿ, ಈ ಸಮಾಜಕ್ಕೆ ಸತ್ಪುರುಷ ಪ್ರಜೆಗಳಾಗಿ ಬದುಕಿ ಇನ್ನೊಬ್ಬರಿಗೆ ಮಾದರಿಯಾಗಬೇಕು ಇಂದು ವ್ಯಸನ ಮುಕ್ತರಾಗಿ ಪುನರ್ಜನ್ಮ ಪಡೆದು ಉತ್ತಮ ಜೀವನ ನಡೆಸುವ ನಿಮ್ಮ ಜೀವನ ಹಸನಾಗಲಿ.ಸಮಾಜದಲ್ಲಿ ಪ್ರೀತಿ ವಿಶ್ವಾಸದಿಂದ ಬದುಕಿ ತೋರಿಸಿ, ಇಂದು ಸರಕಾರಗಳು ನಡೆಸಲು ಅಸಾಧ್ಯವಾದ ಬಹುದೊಡ್ಡ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ ಅಂಧಕಾರದಲ್ಲಿದ್ದ ಬಾಳಿಗೆ ಹೊಸ ಬೆಳಕು ನೀಡಿ ಇಡೀ ಕುಟುಂಬವನ್ನು ಬೆಳಗಿಸಿದ ಈ ಮದ್ಯವರ್ಜನ ಶಿಬಿರವು ಸಮಾಜಕ್ಕೆ ಮಾದರಿ ಮತ್ತು ಆದರ್ಶಪ್ರಾಯವಾಗಿದೆ,ಇದರ ಜೊತೆಗೆ ಗ್ರಾಮಾಭಿವೃದ್ಧಿ ಯೋಜನೆಯ ಸ್ವ ಸಹಾಯ ಸಂಘಗಳ ಸಂಘಟನೆ ಆರ್ಥಿಕ ಶಿಸ್ತು, ಉಳಿತಾಯ ಪ್ರಗತಿ ನಿಧಿ ಕಾರ್ಯಕ್ರಮ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಆಶಿಸಿದರು.*
*ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸ್ಥಾಪಕ ಅಧ್ಯಕ್ಷರಾದ ಶ್ರೀ ಪ್ರಶಾಂತ್ ಚಿಪ್ರಗುತ್ತಿ ಮಾತನಾಡಿ ಇಂದು ನಿಮಗೆಲ್ಲರಿಗೂ ಸಂತೋಷದಾಯಕ ದಿನವಾಗಿದೆ ಮನ ಪರಿವರ್ತನೆಗೊಂಡು ವ್ಯಸನ ಮುಕ್ತ ಹಾದಿಯ ನವ ಜೀವನಕ್ಕೆ ಕಾಲಿಟ್ಟಿದ್ದೀರಿ, ದೇಶದಾದ್ಯಂತ ಮನಶಾಂತಿಯನ್ನು ನೀಡುವ ಅದೆಷ್ಟೋ ಧಾರ್ಮಿಕ ಕೇಂದ್ರಗಳಿವೆ ಆದರೂ ಕೂಡ ಅದೆಷ್ಟೋ ಜನ ಮಧ್ಯದ ದುಶ್ಚಟಕ್ಕೆ ದಾಸರಾಗುತ್ತಿದ್ದಾರೆ. ಶಾಲೆಯಲ್ಲಿ ಸಿಗುವ ಶಿಕ್ಷಣದಲ್ಲಿ ನಾವು ಉತ್ತೀರ್ಣರಾದರೆ ಸಾಲದು ಜೀವನದ ಪರೀಕ್ಷೆಯಲ್ಲಿ ನಾವು ಉತ್ತೀರ್ಣರಾಗಿ ಉತ್ತಮ ಜೀವನ ನಡೆಸಬೇಕು.ಇಂದಿನ ದಿನ ನೀವೆಲ್ಲರೂ ಮದ್ಯವನ್ನ ತ್ಯಜಿಸಿ ನವ ಜೀವನದೆಡೆಗೆ ಕಾಲಿಟ್ಟು ಎಲ್ಲರಿಗೂ ಪ್ರೇರಣೆಯಾಗಿದ್ದೀರಿ, ಈ ನಿಮ್ಮ ನವಜೀವನ ನಾಳೆ ಇನ್ನೊಬ್ಬರಿಗೆ ಮಾದರಿಯಾಗಬೇಕು ರಾಗ ದ್ವೇಷಗಳಿಲ್ಲದೆ ನೀವೆಲ್ಲರೂ ಪ್ರೀತಿಯಿಂದ ಸಮಾಜಕ್ಕೆ ಉತ್ತಮವಾಗಿ ಬದುಕಿ ತೋರಿಸಿ ಎಂದು ತಿಳಿಸಿದರು.*
*ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಎ ಸಿ ಚಂದ್ರಪ್ಪ ಮಾತನಾಡಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆಯು ಮಾಡುವ ಮದ್ಯವರ್ಜನ ಶಿಬಿರದಿಂದ ಜಿಲ್ಲೆಯಲ್ಲಿ ಅನೇಕರು ಕುಡಿತ ಬಿಟ್ಟು ನೆಮ್ಮದಿ ಬದುಕು ಸಾಗಿಸುತ್ತಿದ್ದಾರೆ. ಒಂದು ಸರ್ಕಾರ ಮಾಡದ ಕೆಲಸವನ್ನು ಯೋಜನೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.ಇಂದಿನಿಂದ ನೀವೆಲ್ಲರೂ ಸುಖ ಸಂತೋಷದಿಂದ ಸಮೃದ್ಧಿ ಜೀವನ ನಡೆಸಿಕೊಂಡು ಹೋಗಬೇಕು, ನಿಮ್ಮ ನವ ಜೀವನ ಇನ್ನೊಬ್ಬರಿಗೆ ಮಾದರಿಯಾಗಿ ಪ್ರೇರಣೆಯಾಗಬೇಕು ಎಂದು ತಿಳಿಸಿದರು.*
*ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆಯ ನಿರ್ದೇಶಕ ಸದಾನಂದ ಬಂಗೇರ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆಯ ಇಂತಹ ಒಳ್ಳೆಯ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕುಡಿತಬಿಡಬೇಕು. ನಿಮ್ಮ ಬದುಕು ಬಂಗಾರವಾಗಲಿದೆ ಎಂದರು.*
*ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಶ್ರೀ ಮಲ್ಲಪ್ಪ ಮತ್ತು ಅಸ್ಲಾಂ ಖಾನ್ ಶುಭ ಹಾರೈಸಿದರು.*
*ಸಮಾರೋಪ ಸಮಾರಂಭದ ಕುಟುಂಬ ದಿನವನ್ನು ನಾಗರಾಜ್ ಕುಲಾಲ್ ಯೋಜನಾಧಿಕಾರಿಗಳು ಜನಜಾಗೃತಿ ವಿಭಾಗ ಪ್ರಾದೇಶಿಕ ಕಚೇರಿ ಚಿತ್ರದುರ್ಗ ನಡೆಸಿಕೊಟ್ಟರು.*
*ಇದೇ ವೇಳೆ ಶಿಬಿರಾರ್ಥಿಗಳಿಂದ ನಡೆದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಶಿಬಿರಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು.*
*ಮಧ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಎಲ್ ಏನ್ ಪರಮೇಶ್ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು,ಕಾರ್ಯಕ್ರಮದಲ್ಲಿ ಮಧ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿಯ ಉಪಾಧ್ಯಕ್ಷರಾದ ಟಿ ಎಸ್ ಪ್ರಕಾಶನಂದ,ಲಕ್ಕವಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಭವಾನಿ, ಶ್ರೀಮತಿ ಶ್ವೇತಾ,ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಟಿ ಆರ್ ಶ್ರೀಧರ್, ಮೂಡಲಗಿರಿಯಪ್ಪ,ಶಿಬಿರದ ಆರೋಗ್ಯ ಸಹಾಯಕ ವೆಂಕಟೇಶ್,ಲಕ್ಕವಳ್ಳಿ ವಲಯದ ಮೇಲ್ವಿಚಾರಕ ಸುರೇಶ್, ಸ್ವಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರು ಪದಾಧಿಕಾರಿಗಳು,ಶಿಬಿರಾರ್ಥಿಗಳು,ವಲಯದ ಸೇವಾಪ್ರತಿನಿಧಿಗಳು, VLE ಗಳು ಗ್ರಾಮಸ್ಥರು ಸೇರಿದಂತೆ ಇನ್ನಿತರರು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರನ್ನು ತಾಲೂಕು ಯೋಜನಾಧಿಕಾರಿ ಕುಸುಮಾಧರ್ ಕೆ ಸ್ವಾಗತಿಸಿ, ಕೃಷಿ ಮೇಲ್ವಿಚಾರಕ ಸಂತೋಷ್ ನಿರೂಪಿಸಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಕೆ ಎಸ್ ರಮೇಶ್ ವಂದಿಸಿದರು.*
ಸುಮಾರು ತಿಂಗಳ ಹಿಂದೆ ಕೋಮು ಸಂಘರ್ಷಕ್ಕೆ ಕಾರಣವಾದ ಶಿವಮೊಗ್ಗ ಜಿಲ್ಲೆಯ ರಾಗಿಗುಡ್ಡವು ಈ ಬಾರಿ ಸೌಹಾರ್ದತೆಗೆ ಸಾಕ್ಷಿಯಾಗಿದೆ.
ಶಿವಮೊಗ್ಗ: ನಗರದ ಹೊರ ವಲಯ ರಾಗಿ ಗುಡ್ಡ ಬಡಾವಣೆಯಲ್ಲಿ ಗಣೇಶ ಮೂರ್ತಿಗಳಿಗೆ ಹಿಂದೂ ಹಾಗೂ ಮುಸ್ಲಿಂ ಸಮಾಜದ ಮುಖಂಡರುಗಳು ಒಟ್ಟಾಗಿ ಪೂಜೆ ಸಲ್ಲಿಸಿ ಸೌಹಾರ್ದತೆಯ ಸಂದೇಶವನ್ನು ಸಾರಿದ್ದರು.
ಸೌಹಾರ್ದತೆಯ ಸನ್ನಿವೇಶಕ್ಕೆ ರಾಗಿ ಗುಡ್ಡದ ವಿವಿಧ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಯಾಗಿದ್ದ ಸ್
ಸುಮಾರು ತಿಂಗಳ ಹಿಂದೆ ಕೋಮು ಸಂಘರ್ಷಕ್ಕೆ ಕಾರಣವಾದ ಶಿವಮೊಗ್ಗ ಜಿಲ್ಲೆಯ ರಾಗಿಗುಡ್ಡವು ಈ ಬಾರಿ ಸೌಹಾರ್ದತೆಗೆ ಸಾಕ್ಷಿಯಾಗಿದೆ.
ಶಿವಮೊಗ್ಗ: ನಗರದ ಹೊರ ವಲಯ ರಾಗಿ ಗುಡ್ಡ ಬಡಾವಣೆಯಲ್ಲಿ ಗಣೇಶ ಮೂರ್ತಿಗಳಿಗೆ ಹಿಂದೂ ಹಾಗೂ ಮುಸ್ಲಿಂ ಸಮಾಜದ ಮುಖಂಡರುಗಳು ಒಟ್ಟಾಗಿ ಪೂಜೆ ಸಲ್ಲಿಸಿ ಸೌಹಾರ್ದತೆಯ ಸಂದೇಶವನ್ನು ಸಾರಿದ್ದರು.
ಸೌಹಾರ್ದತೆಯ ಸನ್ನಿವೇಶಕ್ಕೆ ರಾಗಿ ಗುಡ್ಡದ ವಿವಿಧ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಯಾಗಿದ್ದ ಸ್ಥಳಗಳು ಸಾಕ್ಷಿಯಾಗಿವೆ. ಈ ವೇಳೆ ರಾಗಿಗುಡ್ಡ ಶಾಂತಿಪಡೆ ಸಮಿತಿ ಸದಸ್ಯರು ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರಾಗಿ ಗುಡ್ಡದ ಹಿಂದೂ ಹಾಗೂ ಮುಸ್ಲಿಂ ಸಮಾಜದ ಮುಖಂಡರುಗಳು ಮಾತನಾಡಿ ಹಿಂದೂ ಮತ್ತು ಮುಸ್ಲಿಮರ ಭಾವೈಕ್ಯತೆ ಸಂಕೇತವಾಗಿ ಒಟ್ಟಿಗೆ ಸೇರಿ ಗಣೇಶ ಪೂಜೆ ಮಾಡಿದರು. ಎಲ್ಲರಿಗೂ ಕಳಿಸಿ ನಮ್ಮ ಭಾರತ ದೇಶದಲ್ಲಿ ವಿವಿಧ ಜಾತಿ ಧರ್ಮ ಮತ್ತು ಸಮುದಾಯದವರಿದ್ದಾರೆ. ವಿವಿಧತೆಯಲ್ಲಿ ಏಕತೆ ಸಾರುವ ದೇಶವಾಗಿದೆ.
ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳು ಪ್ರಮುಖವಾದ ಹಬ್ಬಗಳಾಗಿವೆ. ನಮ್ಮೆಲ್ಲರ ಭಾವೈಕ್ಯತೆ ಮತ್ತು ಒಗಟು ತೋರಿಸಲು ಈ ಸಂದರ್ಭ ಒಂದಾಗಿ ಬಂದಿದೆ.
ರಾಗಿಗುಡ್ಡದಲ್ಲಿ ಸೌಹಾರ್ದತೆಗೆ ಗಟ್ಟಿ ಮಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಎಲ್ಲಾ ರೀತಿಯ ಸಹಕಾರ ನೀಡಿದೆ ರಾಗಿಗುಡ್ಡದ ಸಾರ್ವಜನಿಕರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದೆ ಹಬ್ಬದ ಆಚರಣೆ ಮತ್ತು ಇತರೆ ಕಾರ್ಯಕ್ರಮಗಳು ಯಶಸ್ವಿಯಾಗಲು ಕಾರಣರಾಗಿದ್ದಾರೆ ಪೋಲಿಸ್ ಇಲಾಖೆಯ ಸೇವೆಯು ಅಮೋಘವಾಗಿದೆ ಎಂದು ತಿಳಿಸಿದರು.
ಯಶಸ್ಸಿನಲ್ಲಿ ನಮ್ಮೆಲ್ಲರ ಸಹಮತ ಮುಖ್ಯವಾಗಿರುತ್ತದೆ ಯಾರೋ ಕೆಲ ಕಿಡಿಗೇಡಿದಿಂದ ಮತ್ತು ಯಾವುದೋ ಸನ್ನಿವೇಶದಲ್ಲಿ ಕಳೆದ ಬಾರಿ ಕಹಿ ಘಟನೆಗಳು ನಡೆದಿದೆ. ಆದರೆ ಅದೆಲ್ಲವನ್ನು ಮರೆತು ಯಾವುದೇ ವೈಮನಸ್ಸು ಮತ್ತು ಸಮಸ್ಯೆಯನ್ನು ಬಗೆಹರಿಸಿಕೊಂಡು ಒಟ್ಟಾಗಿ ಮುಂದೆ ಸಾಗುತ್ತೇವೆ ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಹಳೆಯ ರೀತಿಯ ಘಟನೆಗಳು ಜರುಗದಂತೆ ನಾವೆಲ್ಲರೂ ಪ್ರಯತ್ನಿಸುತ್ತೇವೆ. ಸಹೋದರರ ಮನೋಭಾವದೊಂದಿಗೆ ಎಲ್ಲಾ ಧರ್ಮದ ಹಬ್ಬಗಳಲ್ಲಿ ಒಟ್ಟಾಗಿ ಭಾಗವಹಿಸಿ ಹಬ್ಬಗಳನ್ನು ಸೌಹಾರ್ದತೆಯಿಂದ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದ್ದೇವೆ. ಕಳೆದ ವರ್ಷ ಈ ಪ್ರದೇಶದಲ್ಲಿ ಜರುಗಿದ ಕಳಂಕ ದೂರ ಮಾಡಬೇಕಾಗಿದೆ.
ನಮ್ಮ ಮುಂದಿನ ಪೀಳಿಗೆಗೆ ಮಕ್ಕಳಿಗೆ ಮತ್ತು ಸಮಾಜದ ಇತರರಿಗೆ ಉತ್ತಮ ಸಂದೇಶ ಸಾರುವ ಮುಖಾಂತರ ಮಾದರಿಯಾಗಬೇಕಿದೆ ಎಂದು ಎರಡು ಧರ್ಮಗಳ ಮುಖಂಡರು ಸೇರಿ ಕರೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ರಾಗಿ ಗುಡ್ಡದ ನಿವಾಸಿಗಳಾದ ನೂರ್ ಮಸೀದಿ ಅಧ್ಯಕ್ಷ ಭಾಷಾ ಸಾಬ್, ವಕೀಲರಾದ ರಾಮಚಂದ್ರ ,ದೇವಸ್ಥಾನ ಸಮಿತಿ ಸದಸ್ಯರಾದ ಗಾರೆ ನಾಗಣ್ಣ, ನೂರ್ ಮಸೀದಿ ಉಪಾಧ್ಯಕ್ಷರಾದ ಸಾಧಿಕ್ ,ಸ್ಥಳೀಯ ಪ್ರಮುಖರಗಳಾದ ಬಸವರಾಜ್, ನಾಗರತ್ನಮ್ಮ, ರುದ್ರಜಿ ರಾವ್, ಮಾರುತಿ, ಭಾಷಾ ಸಾಬ್ ,ಸೈಯದ್ ಅಕ್ರಂ ,ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಸತ್ಯನಾರಾಯಣ .ಸಬ್ ಇನ್ಸ್ಪೆಕ್ಟರ್ ಸ್ವಪ್ನ ಮತ್ತು ಇತರೆ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್
ಬೆಂಗಳೂರಿನಲ್ಲಿ ಚಿತ್ರದುರ್ಗ ಮೊಲದ ರೇಣುಕಾ ಸ್ವಾಮಿ ಹತ್ಯೆ, ಅಪೋಲೋ ಮೆಡಿಕಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದನು. ರೇಣುಕಾ ಸ್ವಾಮೀ ಚಿತ್ರದುರ್ಗದ ಲಕ್ಷ್ಮಿ ವೆಂಕಟೇಶ್ವರ ಬಡಾವಣೆಯ ನಿವಾಸಿಯಾಗಿದ್ದನು.
ಬೆಂಗಳೂರು: ಚಿತ್ರದುರ್ಗ ರೇಣುಕಾ ಸ್ವಾಮಿಯ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂದನವಾಗಿದೆ. ಇಂದು ಬೆಳಗಿನ ಜಾವ ಮೈಸೂರಿನ ಫಾರ್ಮ್ಸ್ ನಲ್ಲಿದ್ದ ನಟ ದರ್ಶನ್ ಬಂದನವಾಗಿದೆ. ದರ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್
ಬೆಂಗಳೂರಿನಲ್ಲಿ ಚಿತ್ರದುರ್ಗ ಮೊಲದ ರೇಣುಕಾ ಸ್ವಾಮಿ ಹತ್ಯೆ, ಅಪೋಲೋ ಮೆಡಿಕಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದನು. ರೇಣುಕಾ ಸ್ವಾಮೀ ಚಿತ್ರದುರ್ಗದ ಲಕ್ಷ್ಮಿ ವೆಂಕಟೇಶ್ವರ ಬಡಾವಣೆಯ ನಿವಾಸಿಯಾಗಿದ್ದನು.
ಬೆಂಗಳೂರು: ಚಿತ್ರದುರ್ಗ ರೇಣುಕಾ ಸ್ವಾಮಿಯ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂದನವಾಗಿದೆ. ಇಂದು ಬೆಳಗಿನ ಜಾವ ಮೈಸೂರಿನ ಫಾರ್ಮ್ಸ್ ನಲ್ಲಿದ್ದ ನಟ ದರ್ಶನ್ ಬಂದನವಾಗಿದೆ. ದರ್ಶನ್ ಜೊತೆಯಲ್ಲಿ ಇಬ್ಬರು ಬಾಡಿಗಾರ್ಡ್ ಗಳನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಜೂನ್ ಒಂಬತ್ತರಂದು ಬೆಂಗಳೂರಿನ ಸುಮ್ಮನಹಳ್ಳಿ ಬ್ರಿಡ್ಜ್ ಬಳಿ ರೇಣುಕಾಚಾರ್ಯ ಸ್ವಾಮಿ ಶವ ಪತ್ತೆಯಾಗಿತ್ತು. ಮೃತ ದೇಹದ ಮೇಲೆ ಗಾಯದ ಗುರುತುಗಳನ್ನು ಕಂಡು ಬಂದಿದ್ದ ಹಿನ್ನೆಲೆ ಪೊಲೀಸರು ತನಿಖೆ ಚಿರುಕುಗಳಿಸಿದರು. ಘಟನೆ ಸಂಭಂದ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಶವವನ್ನು ಮೊದಲ ಬಾರಿ ನೋಡಿದ ಅನುಗ್ರಹ ಅಪಾರ್ಟ್ಮೆಂಟ್ನಲ್ಲಿ ನಲ್ಲಿ ಕೆಲಸ ಮಾಡಿಕೊಂಡಿದ್ದ ಸೆಕ್ಯೂರಿಟಿ ಗಾರ್ಡ್ ಈ ಸಂಬಂಧ ದೂರು ದಾಖಲಿಸಿದರು. 35 ವರ್ಷ ಅಪರಿಚಿತ ವ್ಯಕ್ತಿಯ ಮೃತ ದೇಹ ಪತ್ತೆಯಾಗಿದೆ ಎಂದು ದೂರಿನಲ್ಲಿ ದಾಖಲಿಸಿದರು.
ಶನಿವಾರ ಮನೆಯಿಂದ ಹೊರಟವನು ವಾಪಸ್ ಬಂದಿರಲಿಲ್ಲ. ನಿನ್ನೆ ಬೆಂಗಳೂರು ಪೊಲೀಸರು ರೇಣುಕಾ ಸ್ವಾಮಿ ಶವವಾಗಿ ಪತ್ತೆಯಾಗಿರುವ ಮಾಹಿತಿಯನ್ನು ಕುಟುಂಬಸ್ಥರಿಗೆ ನೀಡಲಾಗಿತ್ತು. ರೇಣುಕಾ ಸ್ವಾಮಿಯ ಶವದಲ್ಲಿ ಮುಖ ಹಾಗೂ ತಲೆಗೆ ಮತ್ತು ಕಿವಿಗೆ ರಕ್ತದ ಗಾಯ ಆಗಿರುವುದು ಕಂಡುಬಂದಿತ್ತು.
ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಕೊಲೆ ಮಾಡಿರುವ ಆಸಾಮಿಗಳನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಸೆಕ್ಯೂರಿಟಿ ಗಾರ್ಡ್ ಆಗ್ರಹಿಸಿದರು.
ಚಿತ್ರದುರ್ಗದಿಂದ ಬೆಂಗಳೂರಿಗೆ ರೇಣುಕಾ ಸ್ವಾಮಿಯನ್ನು ಕರೆತಂದು ಹಲ್ಲೆ ಮಾಡಿರುವುದಾಗಿ ತಿಳಿದು ಬಂದಿದೆ.
ಚಿತ್ರದುರ್ಗದ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ ಎಂಬ ರೇಣುಕಾ ಸ್ವಾಮಿಯನ್ನು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಬೆಂಗಳೂರಿಗೆ ಕರೆದುಕೊಂಡ ಬಂದ ಮೇಲೆ ದರ್ಶನ್ ಸೇರಿದಂತೆ ಇವರು ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿದ್ದಾರೆ, ಹಲ್ಲ�
ಮಣಿಪಾಲ್ ಆರೋಗ್ಯ ಕಾರ್ಡ್ 2024 ರ ನೋಂದಣಿ ಆರಂಭ
*ತರೀಕೆರೆ(ಚಿಕ್ಕಮಗಳೂರು)*:
ಮಣಿಪಾಲ್ ಆರೋಗ್ಯ ಕಾರ್ಡ್ 2024ರ ನೋಂದಣಿಯು ಇಡೀ ಕುಟುಂಬಕ್ಕೆ ಗುಣಮಟ್ಟದ ಆರೋಗ್ಯ ಸೇವೆ ಆರಂಭಗೊಂಡಿದೆ. ಭಾರತೀಯ ಆರೋಗ್ಯ ವ್ಯವಸ್ಥೆಯು ದೂರದರ್ಶಿತ್ವದ ನಾಯಕ ಡಾ. ಟಿ.ಎಂ.ಎ. ಪೈ ಅವರ ಸಮರ್ಪಣೆ ಮತ್ತು ಸಮಾಜ ಸೇವೆಯಲ್ಲಿ ಬದ್ಧತೆ ಅಸಾಧಾರಣವಾಗಿ ಅಪರೂಪದ ಅವರ ಕನಸನ್ನು ನನಸಾಗಿಸುವಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಕೈಗೆಟಕುವಂತೆ ಮಾಡ
ಮಣಿಪಾಲ್ ಆರೋಗ್ಯ ಕಾರ್ಡ್ 2024 ರ ನೋಂದಣಿ ಆರಂಭ
*ತರೀಕೆರೆ(ಚಿಕ್ಕಮಗಳೂರು)*:
ಮಣಿಪಾಲ್ ಆರೋಗ್ಯ ಕಾರ್ಡ್ 2024ರ ನೋಂದಣಿಯು ಇಡೀ ಕುಟುಂಬಕ್ಕೆ ಗುಣಮಟ್ಟದ ಆರೋಗ್ಯ ಸೇವೆ ಆರಂಭಗೊಂಡಿದೆ. ಭಾರತೀಯ ಆರೋಗ್ಯ ವ್ಯವಸ್ಥೆಯು ದೂರದರ್ಶಿತ್ವದ ನಾಯಕ ಡಾ. ಟಿ.ಎಂ.ಎ. ಪೈ ಅವರ ಸಮರ್ಪಣೆ ಮತ್ತು ಸಮಾಜ ಸೇವೆಯಲ್ಲಿ ಬದ್ಧತೆ ಅಸಾಧಾರಣವಾಗಿ ಅಪರೂಪದ ಅವರ ಕನಸನ್ನು ನನಸಾಗಿಸುವಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಕೈಗೆಟಕುವಂತೆ ಮಾಡುವುದು ಈ ಕಾರ್ಡ್ನ ಉದ್ದೇಶವಾಗಿದೆ. ಮಣಿಪಾಲ್ ಆರೋಗ್ಯ ಕಾರ್ಡ್ "ಇಡೀ ಕುಟುಂಬಕ್ಕಾಗಿ, ಉತ್ತಮ ಮೌಲ್ಯ, ವಿಶ್ವಾಸಾರ್ಹ ಸೇವೆ " ಎಂಬ ಅಡಿಬರಹದಡಿಯಲ್ಲಿ, ಎಲ್ಲಾ ಸದಸ್ಯರಿಗೆ ಸಮಗ್ರ ಆರೋಗ್ಯ ಪ್ರಯೋಜನಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಮಾಹೆಯ ಕುಲಾಧಿಪತಿ ಡಾ. ರಾಮದಾಸ್ ಪೈ ಅವರ ನೇತೃತ್ವದಲ್ಲಿ 2000 ರಲ್ಲಿ ಪ್ರಾರಂಭವಾದ ಮಣಿಪಾಲ್ ಆರೋಗ್ಯ ಕಾರ್ಡ್ ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆಯನ್ನು ಒದಗಿಸಲು ಶ್ರಮಿಸುತ್ತಿದೆ. ಉಚಿತ ಆರೋಗ್ಯ ಸೇವೆಯನ್ನು ನೀಡುವುದು ಸವಾಲಿನದ್ದಾಗಿದ್ದರೂ, ಈ ಉಪಕ್ರಮವು ರಿಯಾಯಿತಿ ವೆಚ್ಚದಲ್ಲಿ ಆರೋಗ್ಯ ಸೇವೆಯನ್ನು ಖಚಿತಪಡಿಸುತ್ತದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಆರಂಭವಾಗಿ ಕರಾವಳಿ ಮತ್ತು ಮಧ್ಯ ಕರ್ನಾಟಕದ 12-15 ಜಿಲ್ಲೆಗಳಿಗೆ ವಿಸ್ತರಣೆಗೊಂಡಿದೆ . ಕಳೆದ 23 ವರ್ಷಗಳಲ್ಲಿ, ಮಣಿಪಾಲ್ ಆರೋಗ್ಯ ಕಾರ್ಡ್ ಲಕ್ಷಾಂತರ ಜನರಿಗೆ ರಿಯಾಯಿತಿ ದರದಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸಿದೆ.2023 ರಲ್ಲಿ 360,000 ಸದಸ್ಯರು ನೋಂದಾಯಿಸಿಕೊಂಡಿದ್ದಾರೆ , ಇದು ಅದರ ಬೆಳೆಯುತ್ತಿರುವ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಮಣಿಪಾಲ್ ಆರೋಗ್ಯ ಕಾರ್ಡ್ದಾರರು ತಜ್ಞ ಮತ್ತು ಸೂಪರ್ ಸ್ಪೆಷಲಿಸ್ಟ್ ವೈದ್ಯರೊಂದಿಗೆ ಸಮಾಲೋಚನೆ ಶುಲ್ಕದಲ್ಲಿ 50% ರಿಯಾಯಿತಿ, ರೋಗನಿರ್ಣಯ ಮತ್ತು ಪ್ರಯೋಗಾಲಯ ಪರೀಕ್ಷೆ ಸೇವೆಯಲ್ಲಿ 25% ರಿಯಾಯಿತಿ, ರೇಡಿಯಾಲಜಿ ,ಹೊರರೋಗಿ ಕಾರ್ಯವಿಧಾನಗಳು ಮತ್ತು ಮಧುಮೇಹ ಪಾದದ ಆರೈಕೆಯಲ್ಲಿ 20% ರಿಯಾಯಿತಿ, ಡಯಾಲಿಸಿಸ್ನಲ್ಲಿ ₹ 100 ರಿಯಾಯಿತಿ, ಆಸ್ಪತ್ರೆಯ ಔಷಧಿಗಳ ಮೇಲೆ 10% ವರೆಗೆ ರಿಯಾಯಿತಿ ಮತ್ತು ಜನರಲ್ ವಾರ್ಡ್ನಲ್ಲಿ ಒಳರೋಗಿಗಳ ಬಿಲ್ಗಳಲ್ಲಿ (ಕಾನ್ಸುಮಬೆಲ್ಸ್ ಮತ್ತು ಪ್ಯಾಕೇಜ್ಗಳನ್ನು ಹೊರತುಪಡಿಸಿ) 25% ರಿಯಾಯಿತಿ ಸೌಲಭ್ಯವಿದೆ.
ಕಾರ್ಡ್ದಾರರು ಕಸ್ತೂರ್ಬಾ ಆಸ್ಪತ್ರೆ-ಮಣಿಪಾಲ, ಡಾ.ಟಿ.ಎಂ.ಎ ಪೈ ಆಸ್ಪತ್ರೆ-ಉಡುಪಿ, ಡಾ.ಟಿ.ಎಂ.ಎ ಪೈ ರೋಟರಿ ಆಸ್ಪತ್ರೆ-ಕಾರ್ಕಳ, ಕೆ.ಎಂ.ಸಿ ಆಸ್ಪತ್ರೆ-ಮಂಗಳೂರು ಮತ್ತು ಅತ್ತಾವರ, ದುರ್ಗಾ ಸಂಜೀವನಿ ಮಣಿಪಾಲ ಆಸ್ಪತ್ರೆ-ಕಟೀಲು, ಮಣಿಪಾಲ ಆಸ್ಪತ್ರೆ-ಗೋವಾ ಮತ್ತು ಮಣಿಪಾಲ ಹಾಗೂ ಮಂಗಳೂರಿನಲ್ಲಿನ ದಂತ ಕಾಲೇಜುಗಳಲ್ಲಿ ಪ್ರಯೋಜನಗಳನ್ನು ಪಡೆಯಬಹುದು. ಮಣಿಪಾಲ ಮತ್ತು ಮಂಗಳೂರಿನಲ್ಲಿ ಇತರ ಆಸ್ಪತ್ರೆಗಳಲ್ಲಿನ ರಿಯಾಯಿತಿಗಳು ಮತ್ತು ಹೆಚ್ಚಿನ ಮಾಹಿತಿಗಾಗಿ, www.manipalhealthcard.com ಗೆ ಭೇಟಿ ನೀಡಿ ಅಥವಾ 9980854700 / 08202923748 ಅನ್ನು ಸಂಪರ್ಕಿಸಿ. ಎಲ್ಲಾ ನಮ್ಮ ಅಧಿಕೃತ ಪ್ರತಿನಿಧಿಗಳ ಮೂಲಕ ನೋಂದಣಿ ಮಾಡಬಹುದು.
ಪತ್ರಿಕಾಗೋಷ್ಟಿಯಲ್ಲಿ ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯ ಸಮಿತಿ ಸದಸ್ಯರು ವಕೀಲರಾದ ಎಸ್ ಸುರೇಶ್ ಚಂದ್ರ ಜಿಲ್ಲಾ ಉಪಾಧ್ಯಕ್ಷರಾದ ಬಿ ನಾಗರಾಜ್ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಿ ಕೃಷ್ಣ ನಾಯಕ್ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರಾದ ನಾಗೇಂದ್ರಪ್ಪ ಪ್ರಧಾನ ಕಾರ್ಯದರ್ಶಿ ಇಟ್ಟಿಗೆ ಗುರುಮೂರ್ತಿ ಬೆಲೆನಳ್ಳಿ ಮಲ್ಲಿಕಾರ್ಜುನ್ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವ್ಯವಸ್ಥಾಪಕರಾದ ಶ್ರೀ ಮೋಹನ್ ಶೆಟ್ಟಿ, ಸಹಾಯಕ ವ್ಯವಸ್ಥಾಪಕರಾದ ಶ್ರೀ ಪ್ರವೀಣ್, ಶ್ರೀ ಸಂದೀಪ್ ನಾಯ್ಕ ಇವರೆಲ್ಲರೂ ಉಪಸ್ಥಿತರಿದ್ದರು.
We value feedback from our readers. If you have any questions, comments, or concerns, please don't hesitate to get in touch with us using the contact form on our website.
We value feedback from our readers. If you have any questions, comments, or concerns, please don't hesitate to get in touch with us using the contact form on our website.
What's a product or service you'd like to show.
Give customers a reason to do business with you.
Say something interesting about your business here.
What's something exciting your business offers? Say it here.
Give customers a reason to do business with you.
Check out this great video
Have a story idea for us? Would you like to write for us?
Send us a message and let us know what you are thinking about.
Open today | 12:00 am – 12:00 pm |
NEWS 24*7
Sign up to get each issue delivered straight to your inbox.
Check out this great video
We use cookies to analyze website traffic and optimize your website experience. By accepting our use of cookies, your data will be aggregated with all other user data.